ವಿಜಯವಾಣಿ ಸುದ್ದಿಜಾಲ ಧಾರವಾಡ
ಬಸವ ಜಯಂತಿ ನಿಮಿತ್ತ ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯು 25 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಮಹಿಳೆಯರಿಗೆ ರಂಗೋಲಿ ಹಾಗೂ ವಚನ ಗಾಯನ ಸ್ಪರ್ಧೆ ಆಯೋಜಿಸಿದೆ.
ಏ. 26ರಂದು ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು, ಹೆಸರು ನೋಂದಾಯಿಸಲು ಏ. 25 ಕೊನೇ ದಿನ. ವಚನ ಗಾಯನ ಸ್ಪರ್ಧೆ ಏ. 28ರಂದು ನಡೆಯಲಿದ್ದು, ಹೆಸರು ನೋಂದಾಯಿಸಲು ಏ. 26ರಂದು ಕೊನೇ ದಿನವಾಗಿದೆ. ಎರಡೂ ಸ್ಪರ್ಧೆಗಳಿಗೆ ಪ್ರತ್ಯೇಕವಾಗಿ ಪ್ರಥಮ, ದ್ವೀತಿಯ, ತೃತೀಯ ಬಹುಮಾನವಾಗಿ ನಗದು, ಪ್ರಶಸ್ತಿ ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.