ಜಿಲ್ಲೆ

ಅಂತಾರಾಷ್ಟ್ರೀಯ ಮಟ್ಟದ ರಸಾಯನಶಾಸ್ತ್ರ ವಿಜ್ಞಾನಿಗಳ ಸಾಲಿನಲ್ಲಿ ಸ್ಥಾನ ಪಡೆದ ಕೆ.ಎಸ್. ರಂಗಪ್ಪ

ಮೈಸೂರು: ರಾಸಾಯನಶಾಸ್ತ್ರ ವಿಭಾಗದಲ್ಲಿ ಹೊಸ ಆವಿಷ್ಕಾರ ಹಾಗೂ ನಿರಂತರ ಸಂಶೋಧನೆಗೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ರಾಸಾಯನಶಾಸ್ತ್ರಜ್ಞ ಪ್ರೊ.ಕೆ.ಎಸ್. ರಂಗಪ್ಪ ಅಂತಾರಾಷ್ಟ್ರೀಯ ಮಟ್ಟದಲ್ಲಿ 10,575 ಹಾಗೂ ರಾಷ್ಟ್ರ ಮಟ್ಟದಲ್ಲಿ 146ನೇ ಸ್ಥಾನ ಪಡೆದಿದ್ದಾರೆ. ರಿಸರ್ಚ್.ಕಾಮ್‌ನ 3ನೇ ಆವೃತ್ತಿಯಲ್ಲಿ ಉತ್ತಮ ಸಂಶೋಧಕರ ಶ್ರೇಯಾಂಕ ಆಧಾರದ ಮೇಲೆ ಈ ಪಟ್ಟಿ ಪ್ರಕಟಿಸಲಾಗಿದೆ.