ಜಿಲ್ಲೆ

ದೃಢ ನಿಷ್ಠೆ, ಸಮಯ ಪಾಲನೆಯಿಂದ ಸಾಧನೆ ಸಾಧ್ಯ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಜೀವನದಲ್ಲಿ ಹಲವಾರು ತೊಂದರೆಗಳು ಬರುವುದು ಸಹಜ. ಅವುಗಳಿಗೆ ಹೆದರದೆ ನಮಗೆ ಇಷ್ಟವಾದ ಕ್ಷೇತ್ರ ಆಯ್ದುಕೊಂಡು ಪ್ರಯತ್ನಶೀಲರಾಗಬೇಕು. ದೃಢ ನಿಷ್ಠೆ, ಸಮಯ ಪಾಲನೆ, ಸಾಽಸುವ ಅದಮ್ಯ ವಿಶ್ವಾಸಗಳಿಂದ ಸಾಧನೆ ಸಾಧ್ಯ ಎಂದು ಡಾ. ಕಲ್ಮೇಶ ಹಾವೇರಿಪೇಟ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶ್ರೀ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಕಲಾಸಂಗಮ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕ- ಲೇಖಕ ರಂಗನಾಥ ವಾಲ್ಮೀಕಿ ಅವರ `ಸಾಧನೆ- ಸಾಧ್ಯತೆ' ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಧಾರವಾಡ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಽಕಾರಿ ರಾಮಕೃಷ್ಣ ಸದಲಗಿ ಮಾತನಾಡಿ, ರಂಗನಾಥ ವಾಲ್ಮೀಕಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತ, ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಬದುಕಿನಲ್ಲಿ ಗುರಿ ಇರಬೇಕು. ಗುರಿ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಇರಬೇಕು ಎಂದರು.

ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಽಕಾರಿ ಉಮೇಶ ಬಮ್ಮಕ್ಕನವರ ಮಾತನಾಡಿ, ರವಿ ಕಾಣದ್ದನ್ನು ಕವಿ ಕಾಣುವನು ಎಂಬ0ತೆ ರಂಗನಾಥ ಬದುಕಿನಲ್ಲಿ ನಡೆಯುವ ಸಾ ಮಾನ್ಯ ವಿಷಯಗಳನ್ನು ಆಯ್ದುಕೊಂಡು ಆಪ್ತ ನಿರೂಪಣಾ ಶೈಲಿಯ ಬರವಣಿಗೆಗೆ ಸಿದ್ಧಹಸ್ತರು ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯಾಧ್ಯಾಪಕ ಎಸ್.ಬಿ. ಕೇಸರಿ ಮಾತನಾಡಿ, ರಂಗನಾಥ ವಾಲ್ಮೀಕಿ ಬಡತನದಲ್ಲಿ ಬೆಳೆದು ಬವಣೆಗಳನ್ನು ಎದುರಿಸಿದವರು. `ಸಾಧನೆ- ಸಾಧ್ಯತೆ' ಕೃತಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಲೇಖನಗಳನ್ನು ಒಳಗೊಂಡ ಪ್ರೇರಣಾದಾಯಕ ಕೃತಿ ಎಂದರು.

ಉಪನ್ಯಾಸಕ ಅರ್ಜುನ ಕಂಬೋಗಿ, ಕಲಾಸಂಗಮ ಸಂಸ್ಥೆಯ ಪ್ರಭು ಹಂಚಿನಾಳ ಮಾತನಾಡಿದರು. ಶಿಕ್ಷಕ ಕಲಾವಿದ ಎನ್.ಬಿ. ದ್ಯಾಪೂರ ಕೃತಿ ಪರಿಚಯಿಸಿದರು.

ಶ್ರೇಯಾ ರಂಗನಾಥ ವಾಲ್ಮೀಕಿ ಭರತನಾಟ್ಯ ಪ್ರದರ್ಶಿಸಿದಳು. ಶಿಕ್ಷಕಿಯರಾದ ಜೆ.ಆರ್. ಬಾಳೇರಿ ಹಾಗೂ ಬಿ.ಪಿ. ಜೋಶಿ ಪ್ರಾರ್ಥಿಸಿದರು. ಶಿಕ್ಷಕ ಕೆ.ಎ-ï. ಜಾವೂರ ಸ್ವಾಗತಿಸಿದರು. ಮಹೇಶ ಪರಸಣ್ಣನವರ ನಿರೂಪಿಸಿದರು. ನಾಗರಾಜ ತಳವಾರ ವಂದಿಸಿದರು.