ರಂಗಕೇಸರಿ ಲೋಗೋ  
ಜಿಲ್ಲೆ

ಜಮಖಂಡಿಯಲ್ಲಿ ರಂಗಕೇಸರಿ

ವಿನಯ ಆಶೋಕ ನಾಯ್ಕ

ಜಮಖಂಡಿ: ನಗರದ ಬಸವಭವನ ಆವರಣದಲ್ಲಿ ರಂಗಕೇಸರಿ ಉತ್ಸವ ಸಮಿತಿ ವತಿಯಿಂದ ಮಾ.14 ರಂದು ಬೆಳಗ್ಗೆ 8 ಗಂಟೆಗೆ ಹೋಳಿ ಹಬ್ಬದ ಅಂಗವಾಗಿ ರಂಗಕೇಸರಿ ಬಣ್ಣದಾಟ ಅದ್ದೂರಿಯಾಗಿ ಆಚರಿಸಲಾಗುವುದು.

ಪುರುಷರು, ಯುವಕರು, ಮಾತೆಯರು ಹಾಗೂ ಯುವತಿಯರಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಕಲ್ಪಿಸಲಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಣ್ಣದಾಟವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.