ಜಿಲ್ಲೆ

ಸಮಾಜಮುಖಿ ಕಾರ್ಯಗಳೇ ರಂಗಭೂಮಿ ಶಕ್ತಿ : ಡಾ. ಬಲ್ಲಾಳ್​

ಗೋಪಾಲಕೃಷ್ಣ ಪಾದೂರ್

ಉಡುಪಿ : ಸಮಾಜಮುಖಿ ರಂಗ ಚಟುವಟಿಕೆಗಳೇ ರಂಗಭೂಮಿ ಸಂಸ್ಥೆ ಆರು ದಶಕಗಳ ಕಾಲ ಉಳಿಸಿ ಬೆಳೆಸಿ ಮುನ್ನಡೆಸಿದೆ ಎಂದು ರಂಗಭೂಮಿ ಗೌರವಾಧ್ಯಕ್ಷ ಹಾಗೂ ಮಾಹೆ ವಿಶ್ವವಿದ್ಯಾನಿಲಯ ಸಹಕುಲಾಧಿಪತಿ ಡಾ.ಎಚ್​.ಎಸ್​. ಬಲ್ಲಾಳ್​ ಹೇಳಿದರು.

ರಂಗಭೂಮಿಯ ಸಂಸ್ಥೆಯ 60ನೇ ವಾರ್ಷಿಕ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಾ. ಟಿ ಮಾಧವ ಪೈ ಅವರ ಕಾಲದಿಂದಲೂ ರಂಗಭೂಮಿ ಸಂಸ್ಥೆಗೆ ನಿರಂತರವಾಗಿ ಮಣಿಪಾಲದ ಸಂಸ್ಥೆ ಪ್ರೋತ್ಸಾಹಿಸುತ್ತಾ ಬಂದಿದೆ. "ರಂಗಭೂಮಿ ರಂಗ ಶಿಕ್ಷಣ" ಮಕ್ಕಳಲ್ಲಿ ರಂಗಾಸಕ್ತಿಯನ್ನು ಹಾಗೂ ವ್ಯಕ್ತಿತ್ವದ ಬಹುಮುಖ ವಿಕಸನಕ್ಕೆ ಸಹಕಾರಿಯಾಗಿದೆ. 25 ಪ್ರೌಢಶಾಲೆಗಳಲ್ಲಿ ರಂಗ ಶಿಕ್ಷಣ ನೀಡುತ್ತಿರುವುದು ಬಹಳ ಸಂತೋಷದ ವಿಚಾರ ಎಂದರು.

ರಂಗಭೂಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರದಿಪ್​ ಚಂದ್ರ ಕುತ್ಪಾಡಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಭೋಜ ಯು. ಅವರ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಭಾಸ್ಕರ ರಾವ್​ ಕಿದಿಯೂರು ಹಾಗೂ ಎನ್​. ರಾಜಗೋಪಾಲ ಬಲ್ಲಾಳ್​ ಉಪಸ್ಥಿತರಿದ್ದರು.