ಹವ್ಯಾಸಿ ನಾಟಕ ಸಂಸ್ಥೆ ರಂಗಮಾಧ್ಯಮ ಸುವರ್ಣ ಮಹೋತ್ಸವ | ಪಂಚ ಸಾಧಕರಿಗೆ ಗೌರವ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕನ್ನಡ ಭವವನದಲ್ಲಿ ಜು.೨೪ರಂದು ಹವ್ಯಾಸಿ ನಾಟಕ ಸಂಸ್ಥೆ ರಂಗಮಾಧ್ಯಮ ಸುವರ್ಣ ಮಹೋತ್ಸವ ಹಾಗೂ ರಂಗ ಸುವರ್ಣ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಘಟಕ ನಾರಾಯಣ ಕುಲಕರ್ಣಿ, ಕೆ.ಪಿ.ಗಿರಿಧರ ತಿಳಿಸಿದರು.
ಹಿರಿಯ ಕಲಾವಿದ ಡಾ.ವಿ.ಜಿ.ಅಂದಾನಿ, ಹಿರಿಯ ರಂಗ ಕಲಾವಿದ ಐ.ಎಸ್.ನವಲಿ, ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಸದಾನಂದ ಪೆರ್ಲ, ರಂಗ ಕಲಾವಿದೆ ಸಂಗೀತಾ (ಮಾನ್ವಿಕರ್) ಕುಲಕರ್ಣಿ, ಪತ್ರಕರ್ತ ಸಂಗಮನಾಥ ರೇವತಗಾಂವ್ ಅವರಿಗೆ ರಂಗ ಸುವರ್ಣ ಪುರಸ್ಕಾರ ನೀಡಿ ಸತ್ಕರಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
೧೯೭೪ರಲ್ಲಿ ಗಿರಿಡ್ಡಿ ಗೋವಿಂದರಾಜ ಮತ್ತು ಚಂದ್ರಕಾAತ ಕುಸುನೂರ್ ನೇತೃತ್ವದಲ್ಲಿ ರಂಗಮಾಧ್ಯಮ ಸಂಸ್ಥೆ ಆರಂಭವಾಗಿದ್ದು, ಕಲಬುರಗಿಯಲ್ಲಿ ಹವ್ಯಾಸಿ ರಂಗಭೂಮಿಗೆ ನೆಲೆ ಕೊಡುವುದರ ಜತೆಗೆ ನಾಟಕದ ಪ್ರೇP್ಷÀಕ ವರ್ಗವನ್ನೂ ಬೆಳೆಸಿದ ಶ್ರೇಯಸ್ಸಿಗೆ ಪಾತ್ರವಾಗಿದೆ. ನಂತರದಲ್ಲಿ ಪ್ರಭಾಕರ ಸಾತಖೇಡ, ಶ್ರೀಧರರಾವ್, ಡಾ.ಸ್ವಾಮಿರಾವ ಕುಲಕರ್ಣಿ, ಹೇಮಂತ ಕೊ¯್ಲÁಪುರೆ ಅವರು ಸಂಸ್ಥೆಯ ಚಟುವಟಿಕೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದಾರೆ ಎಂದು ಎಂದು ಮಾಹಿತಿ ನೀಡಿದರು.
ಸುವರ್ಣ ಮಹೋತ್ಸವ ವರ್ಷಾಚರಣೆ ಪೂರ್ವಭಾವಿಯಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ, ರಂಗ ಗೀತ ಗಾಯನ ಮತ್ತು ನಾಟಕ ಪ್ರದರ್ಶನಗಳನ್ನೂ ಹಮ್ಮಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ. ರಂಗಮಾಧ್ಯಮದ ಹಿರಿಯ ಕಲಾವಿದರಾದ ಡಾ. ಸ್ವಾಮಿರಾವ ಕುಲಕರ್ಣಿ, ಮೋಹನ ಸೀತನೂರ, ಶಾಂತಾ ಭೀಮಶೇನರಾವ, ವಿಲಾಸ ಸಾತಖೇಡ, ಕೆ.ಪಿ.ಗಿರಿಧರ, ನಾರಾಯಣ ಕುಲಕರ್ಣಿ ಇತರರು ಸಭೆ ಸೇರಿ ರಂಗಮಾಧ್ಯಮದ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ರಂಗ ಸುವರ್ಣ ಪ್ರಶಸ್ತಿ ನೀಡುವ ತೀರ್ಮಾನ ಕೈಗೊಂಡಿದ್ದಾರೆ ಎಂದರು.