ಜಿಲ್ಲೆ

ವ್ಯವಹಾರದಿಂದ ಒತ್ತಡ ಆಗುತ್ತೆ ಅಂತಾ ನೇಣು ಬಿಗಿದುಕೊಂಡ ವ್ಯಾಪಾರಿ

Haveri - Kariyappa Aralikatti

ರಾಣೆಬೆನ್ನೂರ: ವ್ಯವಹಾರದ ಒತ್ತಡದಿಂದ ಸಮಾಧಾನದಿಂದ ವ್ಯಾಪಾರ ಮಾಡಲಾಗದೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಮೃತ್ಯುಂಜಯ ನಗರದಲ್ಲಿ ಗುರುವಾರ ನಡೆದಿದೆ.
ರುದ್ರಮುನಿಸ್ವಾಮಿ ಸೋಮಶೇಖರಯ್ಯ ಹಿರೇಮಠ (33) ಮೃತ ವ್ಯಕ್ತಿ.
ಈತ ದೂಡುವ ವಾಹನದಲ್ಲಿ ಉಪಹಾರ ಮಾರಾಟ ಮಾಡುತ್ತಿದ್ದ. ಜತೆಗೆ ಕಾರು ಬಾಡಿಗೆ ಕೊಡುವ ವ್ಯವಹಾರ ಕೂಡ ಮಾಡುತ್ತಿದ್ದ. ಇತ್ತೀಚೆಗೆ ವ್ಯವಹಾರದ ಒತ್ತಡದಿಂದ ಬೇಸತ್ತು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.