ಜಿಲ್ಲೆ

ವಕ್ಫ ಬೋರ್ಡ್​ ರೈತರ ಉತಾರದಿಂದ ಹೋಗುವವರೆಗೂ ಹೋರಾಟ; ಆರ್​. ಅಶೋಕ

ರಾಣೆಬೆನ್ನೂರ: ಅಧಿವೇಶನ ಆರಂಭವಾದ ಕೂಡಲೇ ವಕ್ಫ ಆಸ್ತಿ ವಿಚಾರ ಕುರಿತು ಸರ್ಕಾರ ತೆಗೆದುಕೊಂಡ ನಿರ್ಧಾರ ಹಿಂತೆಗೆದುಕೊಳ್ಳಲು ಆಗ್ರಹಿಸುತ್ತೇವೆ. ಬಂಡ ಸಿಎಂ ಸಿದ್ದರಾಮಯ್ಯ ಕೇವಲ ರೈತರಿಗೆ ನೀಡಿದ ನೋಟಿಸ್​ ಮಾತ್ರವಲ್ಲ, ಾಮ್​ರ್ 9 ಹಾಗೈ 11ರಲ್ಲಿ ತಿದ್ದುಪಡಿ ತರಬೇಕು. ಇಲ್ಲವಾದರೆ ನಮ್ಮ ಬೇಡಿಕೆ ಹಾಗೂ ರೈತರಿಗೆ ನ್ಯಾಯ ಸಿಗುವವರೆಗೂ ಅಧಿವೇಶನದಲ್ಲಿಯೆ ಧರಣಿ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್​. ಅಶೋಕ ತಿಳಿಸಿದರು.

ವಕ್ಫ ಬೋರ್ಡ್​ಗೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಯಿಂದ ನೋಟಿಸ್​ ಹೋಗಿರುವ ಮನೆಗಳಿಗೆ ಭಾನುವಾರ ಭೇಟಿ ನೀಡಿ ಸಮಸ್ಯೆ ಆಲಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಜನರಿಗೆ ಹಾಗೂ ರೈತರಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ. ಸಿಎಂ ಸಿದ್ದರಾಮಯ್ಯ, ಜಮೀರ್​ ಅಹ್ಮದ್​ನ ಪ್ಲಾ$್ಯನ್​ ಮುಂದುವರಿಯಲು ಬಿಡುವುದಿಲ್ಲ ಎಂದರು.

ಚಳಗೇರಿ ಒಂದೇ ಗ್ರಾಮದಲ್ಲಿ 4 ಎಕರೆ ಜಾಗವಿದೆ. ಇಲ್ಲಿ ಕೆರೆ, ಸರ್ಕಾರಿ ಶಾಲೆಯಿದೆ. ನೂರಾರು ಕುಟುಂಬದವರು ವಾಸವಾಗಿದ್ದಾರೆ. ಒಬ್ಬರೂ ಮುಸ್ಲಿಂ ಕುಟುಂಬದವರು ಇಲ್ಲ. ಆದರೂ ಜಿಲ್ಲಾಧಿಕಾರಿ ನೋಟಿಸ್​ ಜಾರಿ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ನಾವು ನೋಟಿಸ್​ ಕೊಡಲ್ಲ ಎಂದು ಹೇಳುತ್ತಿದ್ದಾರೆ. ನೋಟಿಸ್​ ಬರುವುದು ಮಾತ್ರ ನಿಂತಿಲ್ಲ. ಇದು ಚುಚ್ಚಾಟ ಅಲ್ಲದೆ ಮತ್ತೇನೂ ಎಂದು ಪ್ರಶ್ನಿಸಿದರು.

ವಕ್ಫ ಬೋರ್ಡ್​ ಹೆಸರು ಜಿಲ್ಲಾಡಳಿತ, ತಹಸೀಲ್ದಾರ್​ ಕಚೇರಿಯಲ್ಲಿ ರದ್ದಾದರೆ ಸಾಲದು ವಕ್ಫ ಬೋರ್ಡ್​ನಿಂದ ರದ್ದಾಗಬೇಕು. ಅಂದಾಗ ಸಮಸ್ಯೆ ಬಗೆಹರಿಯಲಿದೆ. ವಕ್ಫ ಬೋರ್ಡ್​ನವರದ್ದು 9 ಲಕ್ಷ ಆಸ್ತಿಯಂತೆ, ಇಷ್ಟೊಂದು ಆಸ್ತಿ ಬಹುಶಃ ಮಿಲಿಟರಿ ಕಡೆಯವರ ಬಳಿಯೂ ಇಲ್ಲ, ದೇಶಕ್ಕೆ ರೈಲ್ವೆ ಸಾರಿಗೆ ಕೊಡುವ ಇಲಾಖೆ ಬಳಿಯೂ ಇಷ್ಟೊಂದು ಆಸ್ತಿ ಇಲ್ಲ ಎಂದು ಲೇವಡಿ ಮಾಡಿದರು. ಇದೀಗ ಏಕಾಏಕಿ ರೈತರನ್ನು ವಕ್ಕಲೇಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2013ರಲ್ಲಿ ಮನಮೋಹನ ಸಿಂಗ್​ ಮಾಡಿರುವ ಆವಾಂತರದಿಂದ ಇಂದು ಇಷ್ಟೊಂದು ಸಮಸ್ಯೆ ಉಂಟಾಗಲಿದೆ. ವಕ್ಫ ಬೋರ್ಡ್​ಗೆ ಉಳುವವನೆ ಒಡೆಯ ಎನ್ನುವ ಕಾಯ್ದೆ ಕೂಡ ಅನ್ವಯ ಆಗುವುದಿಲ್ಲ. ವಕ್ಫ ಆಸ್ತಿ ಅವರನ್ನು ಬಿಟ್ಟು ಯಾರಿಗೂ ಸೇರಿಲ್ಲ ಎಂದು ಕಾನೂನು ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ಸದನದ ಒಳಗೆ ಹೋರಾಟ ಮಾಡುತ್ತೇವೆ ಎಂದರು.

ವಕ್ಫನಿಂದ ರಾಜ್ಯದಲ್ಲಿ ದಂಗೆ ಏಳುವ ವಾತಾವರಣ ನಿರ್ಮಾಣವಾಗಿದೆ. ಇದನ್ನು ಸರಿಪಡಿಸದಿದ್ದರೆ ದಂಗೆ ಏಳುವುದು ನಿಶ್ಚಿತ ಎಂದು ಎಚ್ಚರಿಸಿದರು.

ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಎಸ್​.ಎಸ್​. ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಪರಮೇಶಪ್ಪ ಗೂಳಣ್ಣನವರ ಮತ್ತಿತರರಿದ್ದರು.