ಕೊಟ್ಟೂರಿನಲ್ಲಿ ಬುಧವಾರ ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣ್‌ಕುಮಾರ್ ಪೂಜಾರ್, ಪತ್ನಿ ಹಾಗೂ ಸಂಬಂಧಿಕರೊಂದಿಗೆ ಕೊಟ್ಟೂರೇಶ್ವರ ಸ್ವಾಮಿಗೆ ದೀಡ್ ನಮಸ್ಕಾರ ಹಾಕಿದರು. 
ಜಿಲ್ಲೆ

ಕೊಟ್ಟೂರೇಶ್ವರಗೆ ಬಿಜೆಪಿ ಶಾಸಕರಿಂದ ದೀಡ್ ನಮಸ್ಕಾರ

ಕುರುವತ್ತಿ ಶ್ರೀಕಾಂತಪ್ಪ

ಕೊಟ್ಟೂರು: ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣ್ ಕುಮಾರ್ ಪೂಜಾರ್ ಬುಧವಾರ ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ದೀಡ್ ನಮಸ್ಕಾರ ಹಾಕುವ ಮೂಲಕ ಭಕ್ತರಲ್ಲಿ ಅಚ್ಚರಿ ಮೂಡಿಸಿದರು.

ದೇವಸ್ಥಾನ ಸಮೀಪ ದ್ವಾರಬಾಗಿಲಿನಿಂದ ಪತ್ನಿ, ಬಂಧುಗಳೊಂದಿಗೆ ದೀಡ್ ನಮಸ್ಕಾರ ಆರಂಭಿಸಿ, ದೇಗುಲದ ಮುಂದೆ ಮುಕ್ತಾಯಗೊಳಿಸಿದರು. ಐದು ವರ್ಷದ ಹಿಂದೆಯೂ ಬಿಜೆಪಿ ಟಿಕೆಟ್ ಸಿಕ್ಕಾಗ ಕುಲದೈವ ಕೊಟ್ಟೂರೇಶ್ವರನಿಗೆ ದೀಡ್ ನಮಸ್ಕಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದರು.

ಕೊಟ್ಟೂರೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಆಗ ದೇವರು ಹಾಗೂ ಜನರ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಬಾರಿ ಟಿಕೆಟ್ ಸಿಕ್ಕಿರುವುದರಿಂದ ದೇಗುಲಕ್ಕೆ ಆಗಮಿಸಿ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಕೊಟ್ಟೂರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣೆಯಲ್ಲಿ ಗೆಲುವಿಗಾಗಿ ಪ್ರಾರ್ಥನೆ ಮಾಡಿಕೊಂಡರು.

ಶಾಸಕ ಅರುಣ್‌ಕುಮಾರ್ ಪಾಜಾರ್, ಪತ್ನಿ ಮತ್ತು ಇಬ್ಬರು ಸಂಬಂಧಿಕರೊಂದಿಗೆ ಯಾವುದೇ ಆಡಂಬರ. ಹಿಂಬಾಲಕರಿಲ್ಲದೆ ದೇಗುಲಕ್ಕೆ ಆಗಮಿಸಿ ಸರಳವಾಗಿ ದೀಡ್ ನಮಸ್ಕಾರ ಹಾಕಿದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿತು.