ಜಿಲ್ಲೆ

ಡಾ. ಮಹೇಶ ನಾಲವಾಡ ಫೌಂಡೇಶನ್‌ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ರಾಣೆಬೆನ್ನೂರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ, ಹುಬ್ಬಳ್ಳಿಯ ಡಾ.ಮಹೇಶ ನಾಲವಾಡ ಫೌಂಡೇಶನ್, ಸುಚಿರಾಯು ಹಾಸ್ಪಿಟಲ್, ರಾಣೇಬೆನ್ನೂರಿನ ಎಪಿಎಂಸಿ ವರ್ತಕರ ಸಂಘ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಯೋಗದೊಂದಿಗೆ ನಗರದಲ್ಲಿ ಇತ್ತೀಚೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.
ಶಿಬಿರದಲ್ಲಿ ಹುಬ್ಬಳ್ಳಿಯ ಖ್ಯಾತ ವೈದ್ಯ ಡಾ.ಮಹೇಶ ನಾಲವಾಡ, ಡಾ.ಎನ್.ಎಸ್.ಹಿರೇಗೌಡರ, ಡಾ.ಎಂ.ಸಿ.ತಪಶೆಟ್ಟಿ, ಡಾ.ಬಸವರಾಜ ಕೇಲಗಾರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ವೀರೇಶ ಸಂಗಳದ, ಜಿ.ಜಿ.ಹೊಟ್ಟಿಗೌಡರ, ಜಿ.ಬಿ.ಜಂಬಗಿ, ಸಂತೋಷ ಆಲಕಟ್ಟಿ, ಶಶಿಧರ, ಡಾ.ಶಿವಪ್ರಕಾಶ ತಂಡಿ, ವಿ.ಪಿ.ಲಿಂಗನಗೌಡರ, ಬಸವರಾಜ ಕೇಲಗಾರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.