ಜಿಲ್ಲೆ

ಊಟದ ಬಿಲ್ ಕೇಳಿದ್ದಕ್ಕೆ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನ

Haveri - Kariyappa Aralikatti


ರಾಣೆಬೆನ್ನೂರ, ಡಾಬಾ, ಮಾಲೀಕನ, ಕೊಲೆಗೆ ಯತ್ನ, Ranebennur, daba, owner, attempted murder


ರಾಣೆಬೆನ್ನೂರ: ಊಟದ ಬಿಲ್ ಕೇಳಿದ್ದಕ್ಕೆ ಡಾಬಾದ ಮಾಲೀಕನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ನಗರದ ಹೊರವಲಯದ ಆರಾಧ್ಯ ಡಾಬಾದಲ್ಲಿ ಶುಕ್ರವಾರ ಸಂಭವಿಸಿದೆ.
ತಾಲೂಕಿನ ಹೊಸಹುಲಿಹಳ್ಳಿ ನಿವಾಸಿ ಬಸವರಾಜ ಎಂಡಿಗೇರಿ (46) ಗಾಯಗೊಂಡ ವ್ಯಕ್ತಿ. ಆಂಧ್ರಪ್ರದೇಶದ ಬನಗನಪಲ್ಲಿ ತಾಲೂಕಿನ ನಂದ್ಯಾಲ ಗ್ರಾಮದ ಗುರಪ್ಪ ಜಿ. (38) ಹಲ್ಲೆ ಮಾಡಿದ ವ್ಯಕ್ತಿ.
ಈತ ಡಾಬಾದಲ್ಲಿ ಎರಡ್ಮೂರು ದಿನದಿಂದ ಊಟ ಮಾಡಿ ಬಿಲ್ ಕೊಡದೆ ಹೋಗುತ್ತಿದ್ದ. ಶುಕ್ರವಾರ ಮಾಲೀಕ ಬಸವರಾಜ ಪುಕ್ಸಟ್ಟೆ ಊಟ ಯಾರೂ ಕೊಡಲ್ಲ. ಊಟ ಆದ ಮೇಲೆ ಬಿಲ್ ಕೊಡಬೇಕು ಎಂದು ಹೇಳಿದ್ದಾಗ ಆರೋಪಿಯು ಕೂಡಲೇ ಮಾಲೀಕನ ಮೇಲೆ ಚಾಕುವಿನಿಂದ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚುಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಡಾಬಾದಲ್ಲಿದ್ದ ಜನ ಬಿಡಿಸಲು ಮುಂದಾದಾಗ ಅವರಿಗೂ ಚಾಕು ತೋರಿಸಿ ಬೆದರಿಕೆ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.