ನಾಲತವಾಡ ಸಮೀಪದ ವೀರೇಶನಗರ ಪಕ್ಕದ ಬಸವಸಾಗರ ಜಲಾಶಯದ ಎಡದಂಡೆ ಕಾಲುವೆ ಸೇತುವೆ ಹಾಗೂ ರ್ಯಾಪ್​ಗೆ ತಂತಿ ಬೇಲಿ ಇಲ್ಲದಿರುವುದು. 
ಜಿಲ್ಲೆ

ಬ್ರಿಡ್ಜ್​, ರ್ಯಾಂಪಿಗೆ ಬೇಕಿದೆ ರಣಾ ತಂತಿ ಬೇಲಿ..!

ನಾಲತವಾಡ: ಸಮೀಪದ ವೀರೇಶನಗರ ಪಕ್ಕದ ಬಸವಸಾಗರ ಜಲಾಶಯದ ಎಡದಂಡೆ ಕಾಲುವೆಗೆ ನಿರ್ಮಿಸಲಾದ ಇಳಿಜಾರು ರಸ್ತೆ (ರ್ಯಾಂಪ್​) ಸದ್ಯ ಸರಣಿ ಸಾವುಗಳ ದವಡೆಯಾಗಿದ್ದು, ಜಲಾಶಯದ ಕೆಬಿಜೆಎನ್​ಎಲ್​ ಅಧಿಕಾರಿಗಳು ರ್ಯಾಂಪ್​ಗೆ ರಣಾ ತಂತಿ ಬೇಲಿ ಅಳವಡಿಸುವ ಜೊತೆಗೆ ಭದ್ರತಾ ಸಿಬ್ಬಂದಿ ನೇಮಿಸುವುದು ಅತ್ಯವಶ್ಯವಾಗಿದೆ.

ಹರಿಯುತ್ತಿರುವ ನೀರಲ್ಲೇ ಜೀವಭಯ ಲೆಕ್ಕಿಸದೆ ಮಹಿಳೆಯರು ಬಟ್ಟೆ ತೊಳೆಯುವುದು ಸೇರಿ ವಾಹನ ಸವಾರರು ರ್ಯಾಂಪ್​ ಮೂಲಕ ಕಾಲುವೆಗಿಳಿದು ಈಜಾಡಲು ಜಿಗಿದಾಗ ಹಲವಾರು ಸರಣಿ ಸಾವುಗಳು ಸಂಭವಿಸುತ್ತಿವೆ. ಸೇತುವೆ ರಸ್ತೆಯಲ್ಲಿ ಬಿದ್ದಿರುವ ತಗ್ಗು ದಿನ್ನೆಗಳನ್ನು ಮುಚ್ಚಲು ಇನ್ನೊಮ್ಮೆ ಸಿಮೆಂಟ್​ ಬೆಡ್​ ಹಾಕಬೇಕಿದೆ.

ಅವೈಜ್ಞಾನಿಕ ರ್ಯಾಂಪ್​

ಪ್ರತಿ ವರ್ಷವೂ ಮಳೆಗಾಲದಲ್ಲಿ ನಿರೀೆ ಮೀರಿ ನದಿಯ ಮೂಲಕ ಲಗಟ್ಟಲೇ ಕ್ಯೂಸೆಕ್​ ನೀರನ್ನು ಕಾಲುವೆಗೆ ಹರಿಸಲಾಗುವುದು. ರ್ಯಾಂಪ್​ ಹಾಗೂ ಸೇತುವೆಗೆ ಸುರತಾ ಗೋಡೆ ಅಥವಾ ಗುಣಮಟ್ಟದ ತಂತಿ ಬೇಲಿ ಅಳವಡಿಸದ ಪರಿಣಾಮ ಜನ ಜಾನುವಾರು, ಬಟ್ಟೆ ತೊಳೆಯಲು ಇಳಿಯುವ ಮಹಿಳೆಯರು, ಮತ್ತೊಂದೆಡೆ ಯುವಕರು ಈಜಾಡಲು ಬಂದು ನೀರು ಪಾಲಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಕಾಲುವೆಗೆ ಅರ್ಧ ಕಿ.ಮೀ. ನಷ್ಟು ರಣಾ ತಂತಿ ಬೇಲಿಯಾದರೂ ನಿರ್ಮಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಜೀವ ಬಯದಲ್ಲೇ ಸಂಚಾರ

ಕೃಷ್ಣಾ ನದಿಗೆ ಅಡ್ಡಲಾಗಿ 1982ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ, ಬಾಚಿಹಾಳ ಸೇರಿದಂತೆ ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳ ಅಂದಾಜು 6,22,120 ಹೆಕ್ಟೇರ್​ ನೀರಾವರಿ ಪ್ರದೇಶಕ್ಕೆ ನೀರನ್ನು ಒದಗಿಸಲು ಜಲಾಶಯದ ಎಡ ಹಾಗೂ ಬಲದಂಡೆ ಕಾಲುವೆಗಳನ್ನು ನಿರ್ಮಿಸಲಾಗಿದೆ. ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯೂ ಶಿಥಿಲಗೊಂಡ ಪರಿಣಾಮ ನಿತ್ಯ ಸಂಚರಿಸುವ ವಾಹನಗಳ ಸವಾರರು ಜೀವ ಕೈಯಲ್ಲಿ ಹಿಡಿದೇ ಸಂಚರಿಸಬೇಕಿದೆ. ರಭಸದ ನೀರಿಗೆ ಪ್ರತಿ ವರ್ಷವೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ. ಕಳೆದ 15 ದಿನಗಳಲ್ಲೇ ಓರ್ವ ಕುರಿಗಾಹಿ ಹಾಗೂ ಯುವಕ ನೀರು ಪಾಲಾಗಿದ್ದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ.

ಮಳೆಗಾಲ ಸೇರಿ ಹಲವು ತಿಂಗಳವರೆಗೂ ಕಾಲುವೆಯಲ್ಲಿ ನೀರು ಹರಿಯುತ್ತದೆ. 3 ತಿಂಗಳ ತನಕ ಹೆಚ್ಚಿನ ಪ್ರಮಾಣದಲ್ಲಿ ರಭಸದಿಂದ ನೀರು ಹರಿಯುತ್ತದೆ. ಇನಷ್ಟು ಸಾವು ಸಂಭವಿಸುವ ಮುನ್ನ ಕೆಬಿಜೆಎನ್​ಎಲ್​ ಅಧಿಕಾರಿಗಳು ಸೇತುವೆ ಹಾಗೂ ರ್ಯಾಂಪ್​ಗೆ ಗುಣಮಟ್ಟದ ರಣಾ ತಂತಿ ಬೇಲಿ ಅಳವಡಿಸುವ ಜೊತೆಗೆ ಭದ್ರತಾ ಸಿಬ್ಬಂದಿ ನೇಮಿಸಬೇಕು. ಪವಾಡೆಪ್ಪ ಹವಾಲ್ದಾರ, ಜೆಡಿಎಸ್​ ಮುದ್ದೇಬಿಹಾಳ ತಾಲೂಕು ಟಕದ ಅಧ್ಯಕ್ಷರು, ವೀರೇಶನಗರ
ಪವಾಡೆಪ್ಪ ಹವಾಲ್ದಾರ, ಜೆಡಿಎಸ್​ ಮುದ್ದೇಬಿಹಾಳ ತಾಲೂಕು ಟಕದ ಅಧ್ಯಕ್ಷರು, ವೀರೇಶನಗರ