ಜಿಲ್ಲೆ

ದೇಶದ ಉನ್ನತಿಗೆ ಬಜೆಟ್ ಪೂರಕ

ಮೊಳಕಾಲ್ಮೂರು: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳು ದೇಶದ ಜನರ ಬದುಕಿನ ಉನ್ನತಿಗೆ ಪೂರಕವಾಗಿವೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ತಾಲೂಕಿನ ರಾಜಾಪುರ ಗ್ರಾಮದಲ್ಲಿ ಆಂಜನೇಯಸ್ವಾಮಿ, ನಂದೀಶ್ವರ, ಸಪ್ತಮಾತೃಕ ದೇವಿ, ವೆಂಕಟೇಶ್ವರ ನೂತನ ದೇವಾಲಯ ಉದ್ಘಾಟನೆ ಹಾಗೂ ಶಿಲಾಮೂರ್ತಿ, ಗರುಡ ಗಂಭ, ಶಿಖರ ಕಳಸಾರೋಹಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣ ಮೀಸಲಿಟ್ಟಿರುವುದು ಬಯಲುಸೀಮೆ ಜನರ ಕನಸು ಸಕಾರಗೊಂಡಂತಾಗಿದೆ ಎಂದರು.

ಧಾರ್ಮಿಕ ಕಾರ್ಯಗಳು ಸರ್ವ ಸಮುದಾಯದವನ್ನು ಒಗ್ಗೂಡಿಸುವ ಮೂಲಕ ಜಾತಿ, ಪಂಥ ಎಲ್ಲ ಮರೆತು ಪರಸ್ಪರ ಸಹಬಾಳ್ವೆಯಲ್ಲಿ ಕೂಡಿ ಬಾಳುವ ಸಂದೇಶ ಸಾರುತ್ತವೆ ಎಂದು ಹೇಳಿದರು.

ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ, ಬಸ್ ಡಿಪೊ, ನಿಲ್ದಾಣ ಕಾರ್ಯರೂಪಕ್ಕೆ ಶೀಘ್ರ ಬರಲಿದೆ. ಕೆರೆಗಳ ಪುನಶ್ಚೇತನಕ್ಕೆ 29 ಕೋಟಿ ಹಣ ಮಂಜೂರು ಮಾಡಿಲಾಗಿದೆ. ಶಾಶ್ವತ ನೀರಾವರಿ ಹಾಗೂ ಕುಡಿಯುವ ನೀರಿನ ಬಹು ದಿನಗಳ ಕನಸು ಈಡೇರಲಿದೆ ಎಂದರು.

ನಂತರ ರಾಂಪುರ, ಯರ‌್ರೇನಹಳ್ಳಿ, ತಪ್ಪಗೊಂಡನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬಿಜೆಪಿ ಮಂಡಲ ಅಧ್ಯಕ್ಷ ಡಾ. ಪಿ.ಎಂ.ಮಂಜುನಾಥ, ಜಿಲ್ಲಾ ಉಪಾಧ್ಯಕ್ಷ ರಾಮದಾಸ್, ರಾಂಪುರ ಗ್ರಾಪಂ ಅಧ್ಯಕ್ಷ ಎಲ್.ಪರಮೇಶ್ವರಪ್ಪ, ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್‌ನಾಯಕ, ತಮ್ಮೇನಹಳ್ಳಿ ಗ್ರಾಪಂ ಅಧ್ಯಕ್ಷ ನರಸಿಂಹರಡ್ಡಿ, ಪಪಂ ಅಧ್ಯಕ್ಷ ಟಿ.ರವಿಕುಮಾರ, ಗುರುಲಿಂಗಪ್ಪ, ತಿಪ್ಪೇಸ್ವಾಮಿ, ಸಿದ್ದಾರ್ಥ ಮತ್ತಿತರರಿದ್ದರು.