ಜಿಲ್ಲೆ

ರ‍್ಯಾಂಪ್ ಮೇಲೆ ಬೆಡಗು ಬಿನ್ನಾಣ

ಬೆಂಗಳೂರು: ಕಣ್ಣು ಕುಕ್ಕುವ ವಿದ್ಯುದ್ದೀಪದ ಸೊಬಗು, ಕಿವಿಗಡಚಿಕ್ಕುವ ಸಂಗೀತ, ವಿವಿಧ ಮಾದರಿಯ ವಿಶಿಷ್ಟ ವಿನ್ಯಾಸದ ಉಡುಪು ಹಾಗೂ ಆಭರಣ ಧರಿಸಿ ರ‍್ಯಾಂಪ್ ಮೇಲೆ ಮಾರ್ಜಾಲ ನಡಿಗೆ ಮಾಡಿದ ರೂಪದರ್ಶಿಯರು, ಪ್ರೇಕ್ಷಕರಿಂದ ಶಿಳ್ಳೆ- ಚಪ್ಪಾಳೆ... ಇವು ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ನವರತನ್ ಜ್ಯುವೆಲರ್ಸ್ ಪ್ರೖೆ ಲಿ. ಆಯೋಜಿಸಿರುವ ‘ದಿ ಪ್ರಿನ್ಸೆಸ್’ ಫ್ಯಾಷನ್ ಶೋನಲ್ಲಿ ಕಂಡುಬಂದ ದೃಶ್ಯಗಳು.

ಯುವ ರೂಪದರ್ಶಿಯರಿಗೆ ಅವಕಾಶ ಕಲ್ಪಿಸಿ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಸಾಂಪ್ರದಾಯಿಕತೆ ಹಾಗೂ ಆಧುನಿಕತೆಯನ್ನು ಮೇಳೈಸಿದ್ದು ಗಮನಾರ್ಹ. ರೂಪದರ್ಶಿಗಳು ಮನಮೋಹಕ ಉಡುಪು ಹಾಗೂ ಅದಕ್ಕೊಪು್ಪವ ಆಭರಣಗಳನ್ನು ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಲಲನೆಯರ ಬಿಂಕ, ಬಿನ್ನಾಣದ ನಡೆಗೆ ಮನಸೋತ ಫ್ಯಾಷನ್ ಪ್ರಿಯರು, ಕಿಕ್ಕಿರಿದು ಸೇರಿದ್ದ ಸಭಾಂಗಣದಲ್ಲಿ ಕರತಾಡನದ ಪ್ರೋತ್ಸಾಹ ನೀಡಿದರು.

ಶನಿವಾರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಐಪಿಎಸ್ ಅಧಿಕಾರಿ ಎಂ.ಎ. ಸಲೀಂ ಪಾಲ್ಗೊಂಡಿದ್ದರು. ನವರತನ್ ಜ್ಯುವೆಲರ್ಸ್​ನ ಕುಟುಂಬದ ಸದಸ್ಯರು, ಸಿಬ್ಬಂದಿ ಮತ್ತಿತರಿದ್ದರು. ಯುವ ರೂಪದರ್ಶಿಯರಿಗೆ ಸಿಕ್ಕ ಅವಕಾಶ ಸಂಸ್ಥೆಯ ಉಪಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ನವರತನ್ ಜ್ಯುವೆಲರ್ಸ್ ವತಿಯಿಂದ ಯುವ ರೂಪದರ್ಶಿಯರಿಗೆ ತಮ್ಮ ನೈಪುಣ್ಯ ತೋರಿಸಲು ವೇದಿಕೆ ಕಲ್ಪಿಸಲಾಗಿದೆ. ಮೊದಲ ಬಾರಿಗೆ ಆಯೋಜಿಸಿರುವ ಫ್ಯಾಷನ್ ಶೋನಲ್ಲಿ 18-30 ವರ್ಷದೊಳಗಿನ ರೂಪದರ್ಶಿಯರು ನೋಂದಣಿ ಮಾಡಿಕೊಂಡು ಫ್ಯಾಷನ್​ನಲ್ಲಿ ಪಾಲ್ಗೊಂಡಿದ್ದಾರೆ. ಯುವಕ- ಯುವತಿಯರಿಗೆ ಚಲನಚಿತ್ರಗಳಲ್ಲಿ ನಟಿಸಬೇಕು ಎಂಬ ಆಸೆಯಿರುತ್ತದೆ. ಆದರೆ, ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಕಾರ್ಯಕ್ರಮದಿಂದ ಯುವ ಪ್ರತಿಭೆಗಳಿಗೆ ಸಾಕಷ್ಟು ಅವಕಾಶಗಳು ಸಿಗುತ್ತದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆಯಿದೆ ಎಂದರು.

ಪ್ರತಿಭೆ ಇದ್ದರೂ ಕೆಲವೊಮ್ಮೆ ವೇದಿಕೆ ಗಳು ಸಿಗುವುದಿಲ್ಲ. ಆದರೆ, ನವರತನ್ ಜ್ಯುವೆಲರ್ಸ್ ಸಂಸ್ಥೆಯು ಯುವ ಪ್ರತಿಭೆಗಳಿ ಗಾಗಿ ವೇದಿಕೆ ಕಲ್ಪಿಸಲು ಫ್ಯಾಷನ್ ಶೋ ಆಯೋಜಿಸಿ ರುವುದು ಸಂತಸ ತಂದಿದೆ. ಈ ಬಗೆಯ ಸಣ್ಣ ಅವಕಾಶಗಳೇ ಭವಿಷ್ಯದಲ್ಲಿ ಎತ್ತರಕ್ಕೆ ಸಾಗಲು ವೇದಿಕೆಯಾಗಿದೆ. | ಡಾ.ಆರತಿ ಕೃಷ್ಣ ಎನ್​ಆರ್​ಐ ಪೋರಂ ಮಾಜಿ ಉಪಾಧ್ಯಕ್ಷೆ

ಇಂದು ಸಿ.ಎನ್. ಮಂಜುನಾಥ್ ಭಾಗಿ

ಫ್ಯಾಷನ್ ಶೋ ಕಾರ್ಯಕ್ರಮ ಭಾನುವಾರ (ಡಿ.20) ತೆರೆ ಬೀಳಲಿದೆ. ಸಂಜೆ 6 ಗಂಟೆಗೆ ಆಯೋಜನೆಗೊಂಡಿರುವ ಸಮಾರೋಪ ಸಮಾರಂಭದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ.ಸಿ.ಎನ್. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಭಾನುವಾರ ‘ವೈದ್ಯರ ದಿನಾಚರಣೆ’ಯೂ ಆಗಿರುವುದರಿಂದ ವೈದ್ಯರಾದ ಡಾ.ಚಂದ್ರಮೌಳಿ, ಡಾ.ಸುಧೀರ್ ಪೈ, ಡಾ.ಕಾರ್ತಿಕ್ ನಾಗೇಶ್, ಡಾ.ಅಶೀಶ್ ಶಾ ಮತ್ತು ಡಾ.ನಾಗರತ್ನಮ್ಮ ಪಾಲ್ಗೊಳ್ಳಲಿದ್ದಾರೆ.

ಮೂವರು ಕ್ರೀಡಾಪಟುಗಳಿಗೆ ಸನ್ಮಾನ

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ಮಹಿಳಾ ಕ್ರೀಡಾ ಪಟುಗಳನ್ನು ಸನ್ಮಾನಿಸಲಾಗುತ್ತದೆ. ಜಾಯ್ಲಿನ್ ಲೋಬೋ, ಅನಘಾ ಮುರಳಿ ಪ್ರಸಾದ್, ಖುಷಿ ದಿನೇಶ್ ಸನ್ಮಾನಿತರು.

ವಿಜಯವಾಣಿ ಮತ್ತು ದಿಗ್ವಿಜಯ 244 ನ್ಯೂಸ್ ಪ್ರತಿ ಹಂತ ದಲ್ಲೂ ನನಗೆ ತುಂಬ ಸಹಕಾರ ನೀಡುತ್ತಿವೆ. ಈ ಪ್ರೀತಿ ಹಾಗೂ ವಿಶ್ವಾಸ ಹೀಗೆ ಮುಂದುವರಿ ಯಲಿ. ಮೊದಲ ಬಾರಿಗೆ ಚಿತ್ತಾರ ಶೋಗೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದೆ. ನವರತನ್ ಸಂಸ್ಥೆಯ ಸಹಾಯದಿಂದ ಇದೀಗ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದೆ. | ಮೋಕ್ಷಿತಾ ಕಿರುತೆರೆ ನಟಿ