ಎನ್.ಆರ್.ಪುರ: ಪಟ್ಟಣದ ಅಗ್ರಹಾರದ ಶ್ರೀ ರಾಮಸೇವಾ ಸಮಿತಿ ಆಶ್ರಯದಲ್ಲಿ ಏ.17 ರಿಂದ 24ರವರೆಗೆ ಶ್ರೀ ಉಮಾಮಹೇಶ್ವರಿ ಸಮುದಾಯ ಭವನದಲ್ಲಿ ರಾಮೋತ್ಸವ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಎಚ್.ಎನ್.ಶಿವಶಂಕರ್ ತಿಳಿಸಿದ್ದಾರೆ.
17ರಂದು ಗಣಪತಿ ಪೂಜೆ, ಪುಣ್ಯಾಹವಾಚನ, ಮಂಟಪ ಪ್ರತಿಷ್ಠೆ, ಶ್ರೀ ಸೀತಾರಾಮರ ಕಲ್ಪೋಕ್ತ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಮಮಂಗಳಾರತಿ, ಸಂಜೆ 7ರಿಂದ ಶ್ರೀ ಭಾರತೀ ಭಕ್ತ ವೃಂದದಿಂದ ಮತ್ತು ಶ್ರೀ ಶಾರದಾ ಮಾತಾ ಭಕ್ತ ವೃಂದದಿಂದ ಭಜನೆ ನಡೆಯಲಿದೆ. 18ರಂದು ದಶಮಿ ತ್ರಿಕಾಲ ಪೂಜೆ, ಸಂಜೆ 7ಕ್ಕೆ ಶ್ರೀರಾಮ ಡೋಲೋತ್ಸವ, ಸಂಜೆ 7.30 ರಿಂದ ರಾಗಮಯೂರಿ ಅಕಾಡೆಮಿಯಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. 19ರಂದು ಏಕಾದಶಿ ತ್ರಿಕಾಲ ಪೂಜೆ, ಸಂಜೆ 7ಕ್ಕೆ ಶ್ರೀ ಸೀತಾಜನನ, ಡೋಲೋತ್ಸವ, ಸಂಜೆ 7.30 ರಿಂದ ಸಾರ್ವಜನಿಕರಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. 20ರಂದು ದ್ವಾದಶಿ ತ್ರಿಕಾಲ ಪೂಜೆ, ಸಂಜೆ 7.30ಕ್ಕೆ ಲಲಿತಾ ಭಜನಾ ಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, 21ರಂದು ತ್ರಯೋದಶಿ ತ್ರಿಕಾಲ ಪೂಜೆ, ಸಂಜೆ 7ಕ್ಕೆ ಶ್ರೀ ಸೀತಾರಾಮ ಕಲ್ಯಾಣೋತ್ಸವ, 22ರಂದು ಚತುರ್ದಶಿ ತ್ರಿಕಾಲ ಪೂಜೆ, ಸಂಜೆ 7.30 ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, 23ರಂದು ಬೆಳಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆ, ಶ್ರೀ ಸೀತಾರಾಮ ಪಟ್ಟಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಭಜನೆ ಏರ್ಪಡಿಸಲಾಗಿದೆ. 24ರಂದು ಬೆಳಗ್ಗೆ 10.30ಕ್ಕೆ ಹನುಮೋತ್ಸವ, ಸಂಜೆ 6ಕ್ಕೆ ಭಜನೆ, ಮಹಾಮಂಗಳಾರತಿ ಜರುಗಲಿದೆ ಎಂದು ಮಾಹಿತಿ ನೀಡಿದ್ದಾರೆ.