ಮಹಾಲಿಂಗಪುರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ರಾಮೋತ್ಸವದ ಪ್ರಯುಕ್ತ ಗೋಕಾಕ ತಾಲೂಕಿನ ಕುಲಗೋಡ ಗ್ರಾಮದಿಂದ ನೂರಾರು ಹನುಮ ಮಾಲಾಧಾರಿಗಳು ಬಾಲರಾಮನ ಮೂರ್ತಿ ಹೊತ್ತು ತಂದರು. ಮಲ್ಲಪ್ಪ ಯರಡ್ಡಿ, ರಾಜು ತಾಳಿಕೋಟಿ, ದತ್ತು ಹೂಗಾರ ಮತ್ತಿತರರಿದ್ದಾರೆ. 
ಜಿಲ್ಲೆ

ಗುರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಾಮೋತ್ಸವ

ದತ್ತಾತ್ರೇಯ ಪಿ ಕುಲಕರ್ಣಿ

ಮಹಾಲಿಂಗಪುರ: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಪಟ್ಟಣದ ಗುರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ಥಳೀಯ ಶ್ರೀ ಕ್ಷೇತ್ರ ಮಂತ್ರಾಲಯ ಪಾದಯಾತ್ರೆ ಮಂಡಳಿ ಹಾಗೂ ಸದ್ಭಕ್ತರಿಂದ ಬುಧವಾರ ರಾಮೋತ್ಸವ ಮತ್ತು ಜಟೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಬೆಳಗ್ಗೆ ಶ್ರೀ ಮಹಾಲಿಂಗೇಶ್ವರರ ಜಟೋತ್ಸವ ಕಾರ್ಯಕ್ರಮ ನೆರವೇರಿಸಿದರು.

ಗೋಕಾಕ ತಾಲೂಕಿನ ಕುಲಗೋಡ ಗ್ರಾಮದಿಂದ ನೂರಾರು ಹನುಮ ಮಾಲಾಧಾರಿಗಳು ಬಾಲರಾಮನ ಮೂರ್ತಿಯನ್ನು ಹೊತ್ತು ತಂದರು. ಬಸವೇಶ್ವರ ವೃತ್ತದಲ್ಲಿ ಸ್ಥಳಿಯ ಭಕ್ತರು ಮಾಲಾಧಾರಿಗಳನ್ನು ಸ್ವಾಗತಿಸಿದರು. ನಂತರ ಜೋಡು ರಸ್ತೆ ಮೂಲಕ ನಡುಚೌಕಿ ಮಾರ್ಗವಾಗಿ ಗುರುಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲಾಯಿತು.

ಮಠದಲ್ಲಿ ಪಾದಯಾತ್ರೆ ಮಂಡಳಿ ವತಿಯಿಂದ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಾಜು ತಾಳಿಕೋಟಿ, ಕೃಷ್ಣಗೌಡ ಪಾಟೀಲ, ಶ್ರೀಪಾದ ಗುಂಡಾ, ಧಿರೇಂದ್ರ ಕುಲಕರ್ಣಿ, ರಾಜು ಕೋಳಿಗುಡ್ಡ, ವಿಷ್ಣುಗೌಡ ಪಾಟೀಲ, ಮಲ್ಲಪ್ಪ ಯರಡ್ಡಿ, ದತ್ತು ಹೂಗಾರ, ವಿನೋದ ಹುರಕಡ್ಲಿ ಮತ್ತಿತರರಿದ್ದರು.