ಹುಬ್ಬಳ್ಳಿ: ಇಲ್ಲಿಯ ವೀರಾಪುರ ಓಣಿಯ ಗಡಿ ದುರ್ಗಮ್ಮ ದೇವಸ್ಥಾನ ಬಳಿ ಏರ್ಪಡಿಸಿದ್ದ ಸಂಭ್ರಮದ ಅಯೋಧ್ಯೆಯ ಶ್ರೀರಾಮೋತ್ಸವ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿಜಯವಾಣಿ ಹೊರತಂದ "ರಾಮೋತ್ಸವ' ವಿಶೇಷ ಪುರವಣಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿಡುಗಡೆ ಮಾಡಿದರು.
ವಿಜಯವಾಣಿಯ ರಾಮೋತ್ಸವ ಪುರವಣಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತ್ಯಂತ ಸುಂದರವಾಗಿ ಮೂಡಿ ಬಂದಿದೆ ಎಂದು ಬಣ್ಣಿಸಿದರು.
ಬಿಜಪಿ ಮುಖಂಡರಾದ ಪ್ರಭು ನವಲಗುಂದಮಠ, ಶಶಿಕಾಂತ ಬಿಜವಾಡ, ಮಹೇಂದ್ರ ಕೌತಾಳ, ಇತರರು ಇದ್ದರು.