ಜಿಲ್ಲೆ

ಶ್ರೀಕೃಷ್ಣ ಮಠದಲ್ಲಿ ರಾಮೋತ್ಸವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ದೇವರು ಹಾಗೂ ರಾಘವೇಂದ್ರ ಮಠದಲ್ಲಿ ಏ. 6ರಂದು ಶ್ರೀರಾಮನವಮಿ ಉತ್ಸವ ವಿಜೃಂಭಣೆಯಿಂದ ಜರುಗಲಿದೆ.

ಶ್ರೀಕೃಷ್ಣದೇವರ ಪ್ರತಿಷ್ಠಾಪನೆಯ 52ನೇ ವಾರ್ಷಿಕೋತ್ಸವದೊಂದಿಗೆ ಶ್ರೀರಾಮನವಮಿ ಉತ್ಸವ ಆಚರಿಸಲಾಗುತ್ತಿದೆ. ಬೆಳಗ್ಗೆ ಪಂಚಾಮೃತ ಅಭಿಷೇಕ, ನವಕ ಪ್ರಧಾನ ಹೋಮ, ನವಕ ಪ್ರಧಾನ ಕಲಶಾಭೀಷೇಕ ಅಲಂಕಾರ ಪೂಜೆ, ಮಹಾಪೂಜೆ, ಪಲ್ಲಕ್ಕಿ ಉತ್ಸವ, ಮಧ್ಯಾಹ್ನ 12ಕ್ಕೆ ಶ್ರೀರಾಮ ಜನ್ಮೋತ್ಸವ ಜರುಗಲಿದೆ.

ಭಕ್ತರು ಆಗಮಿಸಿ ಹರಿವಾಯು ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.