ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಕೆಎಚ್ ಬಿ 2ನೇ ಹಂತದ ಬಡಾವಣೆಯಲ್ಲಿ ಭಾನುವಾರ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬಡಾವಣೆಯ ಶ್ರೀ ಹನುಮಂತನ ದೇವಸ್ಥಾನದಲ್ಲಿ ಶ್ರೀರಾಮನ ತೊಟ್ಟಿಲೋತ್ಸವ ವಿಜೃಂಭಣೆಯಿಂದ ನಡೆಯಿತು.
ಕಾಲನಿಯ ಪ್ರಮುಖರಾದ ಸರೋಜಿನಿ ವಾಗ್ಮೋರೆ, ಸಂಗೀತಾ ಮಲ್ಲಣ್ಣವರ, ಶೈಲಜಾ ಮುಧೋಳ, ಶೋಭಾ ಹೊಂಗಲ, ಕಾವ್ಯ ಕೆಂಚನಗೌಡ, ವೈಶಾಲಿ ಹಾಲಕೇರಿ, ಸಿಂಧು ಪೂರ್ಮಾ, ಇತರರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀರಾಮನ ಸಹಸ್ರನಾಮ, ರಾಸ್ತೋತ್ರ, ರಾಮನ ಕುರಿತ ಹಾಡುಗಳು, ಭಜನೆ ಮಾಡಲಾಯಿತು. ಭಕ್ತರಿಗೆ ಪ್ರಸಾದ ವಿತರಣೆ, ಭಾವಚಿತ್ರ ಹಂಚಿಕೆ ಮಾಡಲಾಯಿತು.
ವಿರೇಶ ಪೂರ್ಮಾ, ಮೃತ್ಯುಂಜಯ ಮಟ್ಟಿ, ಕೃಷ್ಣ ಮಲ್ಲಣ್ಣವರ, ಮಂಜುನಾಥ ಹೊಂಗಲ, ಸುರೇಶ ಬುಶೆಟ್ಟಿ, ಮಂಜುನಾಥ ಹೊರಕೇರಿ, ಸಾಯಪ್ಪ ವಾಗ್ಮೋರೆ, ಮಲ್ಲಪ್ಪ ಮಲ್ಲಣ್ಣವರ ಇತರರು ಉಪಸ್ಥಿತರಿದ್ದರು.