ಲಿಂಗಸುಗೂರಿನಲ್ಲಿ ಆರ್‌ಎಸ್‌ಎಸ್‌ನಿಂದ ಅಯೋಧ್ಯೆ ಮಂತ್ರಾಕ್ಷತೆ ಮತ್ತು ಶ್ರೀರಾಮ ಮಂದಿರ ಉದ್ಘಾಟನೆ ಆಮಂತ್ರಣಪತ್ರ ವಿತರಣೆ ಕಾರ್ಯ ನಡೆಯಿತು. ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹಕ ಪಾಂಡುರಂಗ ಆಪ್ಟೆ, ಪ್ರಮುಖರಾದ ಚನ್ನಬಸವ ಹಿರೇಮಠ, ಭೀಮಸೇನರಾವ್ ಕುಲಕರ್ಣಿ, ಅನಂತದಾಸ, ರಾಜು ಪಾಟೀಲ್ ಇತರರಿದ್ದರು. 
ಜಿಲ್ಲೆ

22ರಂದು ರಾಮಮಯ ವಾತಾವರಣ ನಿರ್ಮಾಣವಾಗಲಿ

Kopala - Desk - Eraveni

ಲಿಂಗಸುಗೂರು: ಶ್ರೀರಾಮ ಜನ್ಮಭೂಮಿಯಲ್ಲಿ ರಾಮನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ಭಕ್ತರಿಗೆ ಸಂತಸ ತಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ವಿಭಾಗದ ಪ್ರಚಾರಕ ಸೋಮಶೇಖರ ಹೇಳಿದರು.

ಪಟ್ಟಣದಲ್ಲಿ ಅಯೋಧ್ಯೆಯಿಂದ ಬಂದಿದ್ದ ಮಂತ್ರಾಕ್ಷತೆ ಮತ್ತು ಆಮಂತ್ರಣ ಕರಪತ್ರ ವಿತರಿಸಿ ಭಾನುವಾರ ಮಾತನಾಡಿದರು.

ಭಜನೆ, ಕೀರ್ತನೆ, ಆರತಿ, ದೀಪೋತ್ಸವ

ಜ.22ರಂದು ಅಯೋಧ್ಯೆಯಲ್ಲಿ ಜರುಗುವ ರಾಮನ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಅಂದು ಶ್ರೀರಾಮ, ಆಂಜನೇಯ ಪೂಜೆ, ಭಜನೆ, ಕೀರ್ತನೆ, ಆರತಿ, ದೀಪೋತ್ಸವ ಹಾಗೂ ಶ್ರೀರಾಮ, ಹನುಮಾನ್ ಚಾಲೀಸಾ ಪಠಣೆ ಮಾಡುವ ಮೂಲಕ ವಾತಾವರಣ ರಾಮಮಯವಾಗಬೇಕು. ಅಯೋಧ್ಯೆಯಿಂದ ಕಳುಹಿಸಲಾದ ಮಂತ್ರಾಕ್ಷತೆ ಮತ್ತು ಆಮಂತ್ರಣ ಪ್ರತಿ ಮನೆಗೆ ತಲುಪಿಸುವ ಕಾರ್ಯ ದೇಶಾದ್ಯಂತ ನಡೆದಿದೆ ಎಂದರು.