ಜಿಲ್ಲೆ

ಶ್ರೀರಾಮ ದೀಪಾವಳಿ ಸಪ್ತಾಹ, ಸುಂದರಕಾಂಡ ಕಥಾ ಪ್ರವಚನ

Dharwada - Basavaraj Idli

ಹುಬ್ಬಳ್ಳಿ: ಅಯೋಧ್ಯೆ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ ವಿಶ್ವ ಹಿಂದು ಪರಿಷತ್, ವಿಜಯನಗರ ಹೌಸಿಂಗ್ ಕೋ ಅಪರೇಟಿವ್ ಸೊಸೈಟಿ, ವಿಜಯಾಂಜನೇಯ ವೇದ ಸಂಸತ ವಿದ್ಯಾಲಯ ಹಾಗೂ ವೇದಪೀಠ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿಯ ವಿಜಯನಗರ ಕೆಂಪಣ್ಣವರ ಕಲ್ಯಾಣಮಂಟಪ ಮಾರುತಿ ದೇವಾಲಯದಲ್ಲಿ ಜ. 17ರಿಂದ 23ರ ವರೆಗೆ ಶ್ರೀರಾಮ ದೀಪಾವಳಿ ಸಪ್ತಾಹ ಉತ್ಸವ ಏರ್ಪಡಿಸಲಾಗಿದೆ.

ನಿತ್ಯ ಸಂಜೆ 6.15ಕ್ಕೆ ವೇದಪೀಠದ ಗುರುಗಳಾದ ಡಾ. ಕಂಠಪಲ್ಲೀ ಸಮೀರಣಾಚಾರ್ಯ ಇವರಿಂದ ಸುಂದರಕಾಂಡ ಕಥಾ ಪ್ರವಚನ ನಡೆಯಲಿದೆ.

ರಾಮಭಕ್ತರಿಂದ ಶ್ರೀರಾಮರಕ್ಷಾ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಪಾರಾಯಣ, ಪಠಣ ನಡೆಯಲಿದೆ. ರಾಮಭಕ್ತ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾನ್ವಿತ ವಿದ್ಯಾಥಿರ್ಗಳಿಗೆ ಪಾರಿತೋಷಕ ಪ್ರದಾನ ಮಾಡಲಾಗುತ್ತದೆ.

ಜ. 22ರಂದು ಬೆಳಗ್ಗೆ 9ರಿಂದ ಶ್ರೀರಾಮ ದೇವರಿಗೆ ವೇದಪೀಠದ ಗುರುಗಳ ಮಾರ್ಗದರ್ಶನದಲ್ಲಿ ಲಕ್ಷ ತುಳಸಿ ಅರ್ಪಣೆ ಮತ್ತು ರಾಮರಕ್ಷಾ ಸ್ತೋತ್ರ ಹಾಗೂ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಹನುಮಾನ್ ಚಾಲೀಸ ಪಠಣ ನಡೆಯಲಿದೆ.

ವಿಜಯನಗರ ಭಜನಾ ಮಂಡಳಿಯ ಮಾತೆಯರಿಂದ ಭಜನೆ ಜರುಗಲಿದೆ.

ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾ ಉತ್ಸವದ ನೇರ ಪ್ರಸಾರ ಆಯೋಜಿಸಲಾಗಿದೆ. ಸಂಜೆ ಪ್ರವಚನ, ಶ್ರೀರಾಮಗುಣದರ್ಪಣ ರೂಪಕ (ಮಕ್ಕಳಿಂದ) ದೀಪೋತ್ಸವ, ಪಲ್ಲಕಿ ಸೇವೆ ಹಾಗೂ ಮಂಗಳಾರತಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿಜಯನಗರ ಸೊಸೈಟಿ ಚೇರ್ಮನ್ ವಿ.ಸಿ. ದಿನೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.