Ramji was the voice of the oppressed people.  
ಜಿಲ್ಲೆ

ತುಳಿತಕ್ಕೊಳಗಾದ ಜನರ ದನಿಯಾಗಿದ್ದ ರಾಮಜಿ

ಜಮಖಂಡಿ: ಬಡವರು, ತುಳಿತಕ್ಕೊಳಗಾದ ಜನರನ್ನು ಮೇಲಕ್ಕೆತ್ತುವ ಕಾರ್ಯವನ್ನು ಮಹರ್ಷಿ ವಿಠಲ್ ರಾಮಜಿ ಶಿಂಧೆ ಮಾಡಿದ್ದಾರೆ ಎಂದು ಹಿರಿಯ ನ್ಯಾಯವಾದಿ ತಾತಾಸಾಹೇಬ ಬಾಂಗಿ ಹೇಳಿದರು.

ನಗರದ ರಾಮಟೇಕಡಿ ವಿಠ್ಠಲ ಮಂದಿರದಲ್ಲಿ ಕರ್ಮವೀರ ಮಹರ್ಷಿ ವಿಠಲ್ ರಾಮಜಿ ಶಿಂಧೆ ಅವರ 152ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ಮಹನೀಯ ಎಂದರು.

ದೇಶದ ಹೆಮ್ಮೆಯ ಪುತ್ರ ವಿಠ್ಠಲ ರಾಮಜಿ ಶಿಂಧೆ ಅವರ ಗುರುತಿಗೆ ಜಮಖಂಡಿ ನಗರದಲ್ಲಿ ಒಂದು ಜಾಗ ನೀಡದಿರುವುದು ಬೇಸರ ಮೂಡಿಸುವ ಸಂಗತಿ ಎಂದರು.

ಬಾಗಲಕೋಟೆ ವಿವಿಯ ಮಲ್ಲಿಕಾರ್ಜುನ ಮರಡಿ, ಬಿ.ಎನ್. ಗಸ್ತಿ, ಗೀತಾ ಸೂರ್ಯವಂಶಿ, ಸುರೇಶ ಭೋಸಲೆ ಮಾತನಾಡಿದರು.

ಎ.ಆರ್. ಶಿಂಧೆ, ಮೋಹನ ಸಾವಂತ, ಸುಭಾಷ ಚವಾಣ, ಶರದ ಜಾಧವ, ಧನರಾಜ್ ಮೋರೆ, ಸುಭಾಷ ಕಾಶಿದ, ಪಾಪಾ ಚವಾಣ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ ಶಿಂಧೆ ಇದ್ದರು.