ಜಿಲ್ಲೆ

ಮಹಿಳೆಯರಿಗೆ ರಮಜಾನ್​ ಕಿಟ್​ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಬಡವರು, ಮಹಿಳೆಯರಿಗೆ ಸಹಾಯ ಮಾಡುವ ಮೂಲಕ ಎ.ಜೆ. ಮುಧೋಳ ಅಭಿಮಾನಿಗಳ ಸಂಘವು ಸಾಮಾಜಿಕ ಸೇವೆಯಲ್ಲಿ ತನ್ನನ್ನು ಗುರುತಿಸಿಕೊಂಡಿದೆ ಎಂದು ಧಾರ್ಮಿಕ ಗುರು ಮೌಲಾನ ಮಹ್ಮದ ಅಲಿ ಖಾಜಿ ಹೇಳಿದರು.

ಇಲ್ಲಿಯ ದಿ. ಎ.ಜೆ. ಮುಧೋಳ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ರಮಜಾನ್ ಅಂಗವಾಗಿ ಏರ್ಪಡಿಸಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

ರಮಜಾನ ಪ್ರಯುಕ್ತ ಮುಸ್ಲಿಂರು ಶ್ರದ್ಧಾ ಭಕ್ತಿಯಿಂದ ತಿಂಗಳು ಪೂರ್ತಿ ಕಠಿಣ ಉಪವಾಸ ವ್ರತ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಿಟ್ ವಿತರಿಸಿದ್ದು ಶ್ಲಾಘನೀಯ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅನ್ವರ ಮುಧೋಳ ಮಾತನಾಡಿ, ಇಂತಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಯುವಕರು ಪಾಲ್ಗೊಂಡು ಬಡವರಿಗೆ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು.

ಕರ್ನಾಟಕ ಮುಸ್ಲಿಂ ರೈಟ್ಸ್ ಫೌಂಡೇಷನ್ ಸಂಚಾಲಕ ನಜೀರ ಅಹ್ಮದ ಕೋಲಕಾರ, ಬಾಬಾಜಾನ ಮುಧೋಳ, ಟೇರನ್ಸ ತೇಲಕರ್, ಅಬ್ದುಲ ಕರೀಮ್ ಲಕ್ಕುಂಡಿ, ಸಂಜಯ ಭಂಡಾರಿ, ಬಸೀರ ಮುಧೋಳ, ಅನೀಲ ಪಠವಾ, ವಿಮಲ್ ಜೈನ್, ಮುಂತಾದವರು ಭಾಗವಹಿಸಿದ್ದರು.