ಜಿಲ್ಲೆ

ಬಾಂಬ್ ಸ್ಫೋಟ ಪ್ರಕರಣ; ರಾಮೇಶ್ವರಂ ಕೆಫೆ ಪುನರಾರಂಭಿಸಲು ಅನುಮತಿ ನೀಡದ ಪೊಲೀಸರು

ಬೆಂಗಳೂರು: ಬಾಂಬ್ ಸ್ಫೋಟ ಪ್ರಕರಣ ಸಂಬಂಧ ತನಿಖಾ ಹಂತದಲ್ಲಿರುವಾಗಲೇ ರಾಮೇಶ್ವರಂ ಕೆಫೆ ಪುನರಾರಂಭಿಸಲು ಕೆಫೆ ಮಾಲೀಕರು ಮುಂದಾಗಿದ್ದಾರೆ.

ಮಾರ್ಚ್ 1 ರಂದು ಪೂರ್ವ ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿ ಹತ್ತು ಜನರು ಗಾಯಗೊಂಡಿದ್ದರು. ಬಾಂಬ್ ಸ್ಫೋಟ ಘಟನೆ ಸಂಬಂಧ ಎನ್ ಐಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ತನಿಖೆ‌ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಶಿವರಾತ್ರಿ ದಿನದಂದೇ ಕೆಫೆ ಮತ್ತೆ ಆರಂಭಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ, ಸ್ಫೋಟ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಹಿನ್ನೆಲೆ ಮಾರ್ಚ್ 8 ರಂದು ಕಫೆ ಆರಂಭಕ್ಕೆ ಅನುಮತಿ ಸಿಗುವುದು ಅನುಮಾನವಾಗಿದೆ.

ಸ್ಫೋಟ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.   ಈ ನಡುವೆ ಕೆಫೆ ಪುನರಾರಂಭಕ್ಕೆ ಮಾಲೀಕರು ಮುಂದಾಗಿದ್ದರೂ ಸ್ಥಳೀಯ ಪೊಲೀಸರಿಂದ ಎನ್​ಒಸಿ ಪಡೆಯುವುದು ಅವಶ್ಯಕವಾಗಿದೆ. ಆದರೆ, ತನಿಖಾ ಹಂತವಾಗಿ ಕೆಫೆ ತೆರೆಯಲು ಪೊಲೀಸರು ಅನುಮತಿ ನೀಡಿಲ್ಲ.