ಮಹಾಲಿಂಗಪುರ: ಇಲ್ಲಿಗೆ ಸಮೀಪದ ಶಿರೋಳ ಗ್ರಾಮದ ರಮೇಶ ಗಡದನ್ನವರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯರಾದ ಅಶ್ವಿನಿ ಹೊಸಮನಿ(ಕ್ಯಾಪ್ಟನ್), ಮೇಘಾ ಹಳ್ಳೂರ, ರಾಧಿಕಾ ಗಣಿ, ಕವಿತಾ ಕೊಣ್ಣೂರ, ಲಕ್ಷ್ಮೀ ಹಿಪ್ಪರಗಿ, ಐಶ್ವರ್ಯಾ ಗೆಣ್ಣೆನವರ, ಸಹನಾ ಹೊಸೂರ, ಅಕ್ಷತಾ ನಿಂಗನೂರ, ಜ್ಯೋತಿ ಎಳ್ಳೆಮ್ಮಿ ತಂಡದಲ್ಲಿದ್ದಾರೆ.
ಇದೇ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರು ತೃತೀಯ ಸ್ಥಾನ ಪಡೆದಿದ್ದಾರೆ.
ತರಬೇತುದಾರ ಎಸ್.ಮಡ್ಡಪ್ಪಗೋಳ, ಎಸ್.ಎಸ್.ಕರವಳ್ಳಿಯವರ ಹಾಗೂ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿನಿಯರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.