ವಿಜಯಪುರ: ಅಧಿಕಾರದಲ್ಲಿದ್ದಾಗ ನಾವು ಮಾಡುವ ಕೆಲಸಗಳನ್ನು ಜನ ಸ್ಮರಿಸುವಂತಿರಬೇಕು. ಆದರೆ, ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯ ಜನ ನೆನಪಿಡುವ ಯಾವ ಕೆಲಸಗಳನ್ನೂ ಮಾಡಿಲ್ಲ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಮತ್ತು ಕಂಬಾಗಿಯಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿ, ಎಐಸಿಸಿ ಅಧ್ಯ ಮಲ್ಲಿಕಾರ್ಜುನ ರ್ಖಗೆ ಅವರು ಕಲಬುರಗಿ ಸಂಸದರಾಗಿ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸಿದರು.
ಇಎಸ್ಐ ಆಸ್ಪತ್ರೆ ನಿರ್ಮಿಸಿದರು. ಪ್ರಕಾಶ ಹುಕ್ಕೇರಿ ಸಂಸದರಾಗಿ ಚಿಕ್ಕೋಡಿ ಮತೇತ್ರದಲ್ಲಿ ಸವಳು&ಜವಳು ಸಮಸ್ಯೆ ಬಗೆಹರಿಸುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು.
ಇದರಿಂದಾಗಿ ಜನ ಈಗಲೂ ಅವರನ್ನು ಸ್ಮರಿಸುತ್ತಾರೆ. ಇವರ ಅಭಿವೃದ್ಧಿ ಕಾರ್ಯಗಳನ್ನು ನೋಡಿಯಾದರೂ ಸಂಸದ ರಮೇಶ ಜಿಗಜಿಣಗಿ ವಿಜಯಪುರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಬೇಕಿತ್ತು. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸಂಸತ್ತಿಗೆ ಹೋಗಿ ಪ್ರಯೋಜನವಾದರೂ ಏನು? ಎಂದು ಪ್ರಶ್ನಿಸಿದರು.
ಕೆಲವು ರಾಜ್ಯಗಳ ಆರ್ಥಿಕತೆ ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಪ್ರವಾಸೋದ್ಯಮ, ತೋಟಗಾರಿಕೆ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಸಂಸದರು ಸ್ಪಂದಿಸಿಲ್ಲ. ಹೀಗಾಗಿ ಈ ಬಾರಿ ರಾಜು ಆಲಗೂರ ಅವರನ್ನು ಗೆಲ್ಲಿಸೋಣ ಎಂದರು.
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸಂಗನಗೌಡ ಪಾಟೀಲ ಚಿಕ್ಕಗಲಗಲಿ, ಮುಖಂಡರಾದ ಬಸನಗೌಡ ಪಾಟೀಲ ಹೊಸೂರ, ಎಸ್.ಎಂ. ಸೊನ್ನದ, ಎಂ.ಕೆ. ಶಿವಣ್ಣವರ, ಸಂಜು ಕಂಬಾಗಿ ಮಾತನಾಡಿ, ರಾಜು ಆಲಗೂರ ಅವರನ್ನು ಗೆಲ್ಲಿಸುವ ಮೂಲಕ ಸಚಿವ ಎಂ.ಬಿ. ಪಾಟೀಲರ ಕೈ ಬಲಪಡಿಸೋಣ ಎಂದರು.
ಎಲ್.ಎಸ್. ನಿಡೋಣಿ, ಲಕ್ಷ$್ಮಣ ಚಿಗದಾನಿ, ಪಾಂಡುಗೌಡ ಬಿರಾದಾರ, ವಿ.ಎಚ್. ಪಾಟೀಲ, ರಮೇಶ ಯರಗಟ್ಟಿ, ಸಂಜುಗೌಡ ಪಾಟೀಲ, ಎಂ.ಬಿ. ಮದರಖಂಡಿ, ಕೆ.ಎಂ. ಮಠಪತಿ, ರಂಗನಗೌಡ ಕ. ಬಿರಾದಾರ, ಅಪ್ಪಾಸಾಹೇಬಗೌಡ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಮಹಾಳಿಂಗರಾಯ ಮಹಾರಾಜರು ಮತ್ತಿತರರಿದ್ದರು.