ಹಂಪಿ: ಉತ್ಸವದ ಮೊದಲ ದಿನ ಸಿನಿ ತಾರೆಯರಾದ ರಮೇಶ ಅರವಿಂದ, ಪ್ರೇಮಾ ಹಾಗೂ ಪೂಜಾಗಾಂಧಿ ಆಗಮಿಸಿ ಉತ್ಸವದ ಮೆರುಗು ಹೆಚ್ಚಿಸಿದರು.
ಇದನ್ನೂ ಓದಿ: ಹಂಪಿ ಉತ್ಸವಕ್ಕೆ ಬರಲಿದ್ದಾರೆ ಸ್ಟಾರ್ಗಳು
ನಟ ರಮೇಶ ಅರವಿಂದ ಮಾತನಾಡಿ, ಹಂಪಿ ಅಂದರೆ ಸೌಂದರ್ಯ. ಇಲ್ಲಿ ಸೇರಿರುವ ಜನರು ಇದಕ್ಕೆ ಸಾಕ್ಷಿ. ಅಂದು, ಇಂದು, ಮುಂದೆ ಕನ್ನಡಿಗರು ಶ್ರೇಷ್ಠರು. ವಿಜಯನಗರ ಸಾಮ್ರಾಜ್ಯ ಆಗಿನ ಕಾಲದಲ್ಲೇ ಅತ್ಯಂತ ವೈಭವದಿಂದ ಮೆರೆದಿದೆ.
ಇತಿಹಾಸವನ್ನು ಈಗಿನ ಸ್ಥಿತಿಗೆ ಹೋಲಿಸಬಾರದು. ಆಯಾ ಕಾಲಘಟ್ಟದಲ್ಲೇ ನೋಡಬೇಕು. ಅಂದಾಗ ಅದೊಂದು ಅದ್ಭುತ ಎನಿಸುತ್ತೆ. ಹಂಪಿ ನಮ್ಮ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಪ್ರತಿಬಿಂಬ. ವೈಭವದಿಂದ ಮೆರೆದ ಸಾಮ್ರಾಜ್ಯ ನಶಿಸಿದ್ದು ನಮಗೆಲ್ಲ ಪಾಠ ಎಂದರು.
ನಟಿ ಪ್ರೇಮಾ ಮಾತನಾಡಿ, ನಾನು ಒಂದೆರೆಡು ಬಾರಿ ಚಿತ್ರೀಕರಣಕ್ಕೆ ಹಂಪಿಗೆ ಬಂದಿದ್ದೆ. ಮೊದಲ ಬಾರಿ ಉತ್ಸವಕ್ಕೆ ಬಂದಿರುವೆ. ನಿಮ್ಮೆಲ್ಲರ ಪ್ರೀತಿ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು. ನಟಿ ಪೂಜಾ ಗಾಂಧಿ ಮಾತನಾಡಿ, ನಮ್ಮ ವಿಜಯನಗರ ಇತಿಹಾಸ, ಪರಂಪರೆ ನೂರಾರು ವರ್ಷದಿಂದ ನಡೆದು ಬಂದಿದೆ. ಇದು ಕೇವಲ ಸಮಾವೇಶ ಅಲ್ಲ. ಕನ್ನಡ ಭಾಷೆ, ಸಂಸ್ಕೃತಿ ಸಂಕೇತ ಎಂದ ಹರ್ಷ ವ್ಯಕ್ತಪಡಿಸಿದರು.