ಬಸವನಬಾಗೇವಾಡಿ: ತಾಲೂಕಿನ ಮಸಬಿನಾಳ ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಬೆಂಬಲಿತ ರಮೀಜಾ ಬಾಬುಲಾಲ ಮೈರಾ ಅಧ್ಯಕ್ಷರಾಗಿ ಹಾಗೂ ಶರಣಪ್ಪ ಪಡಸಲಗಿ ಉಪಾಧ್ಯಕ್ಷರಾಗಿ ಗುರುವಾರ ಆಯ್ಕೆಯಾದರು.
ಗ್ರಾಮ ಪಂಚಾಯಿತಿಯ ಒಟ್ಟು 18 ಸದಸ್ಯರಲ್ಲಿ 17 ಸದಸ್ಯರು ಇದ್ದರು. ಪಿಡಬ್ಲ್ಯುಡಿ ಜೆ.ವಿ. ಕಿರಸೂರ ಚುನಾವಣಾಧಿಕಾರಿಯಾಗಿ, ಸಹಾಯಕರಾಗಿ ಜೆಇ ಬಿ.ಎಂ. ಬಿರಾದಾರ, ಪಿಡಿಒ ಶ್ರೀಶೈಲ ತಳವಾರ ಕಾರ್ಯನಿರ್ವಹಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು.
ಭಾಗ್ಯಶ್ರೀ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಪಾಟೀಲ, ರಾಜುಗೌಡ ಪಾಟೀಲ, ಬಾಬಾಗೌಡ ಪಾಟೀಲ, ಕಲ್ಲಪ್ಪ ರಂಜಣಗಿ, ಶಾಂತಪ್ಪ ಬೈಚಬಾಳ, ಬಾಬು ಗಂಗಪ್ಪಗೊಳ, ದ್ಯಾಮನಗೌಡ ಪಾಟೀಲ, ಶೇಖರ ಕಾರಜೋಳ, ಹುಸೇನ್ ಮೈರಾ, ಬಸಲಿಂಗಯ್ಯ ಕಂದಗಲ್ಲಮಠ ಇತರರಿದ್ದರು.