ಬೆಂಗಳೂರು: ಜಗತ್ತು ಎಷ್ಟೇ ಬದಲಾದರೂ ಮಾನವ ಸಂಬಂಧಗಳನ್ನು ಸುಭದ್ರಗೊಳಿಸುವುದೇ ನಿಜವಾದ ಗುರುಧರ್ಮ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಟಕದ ಆಶ್ರಯದಲ್ಲಿ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯುತ್ತಿರುವ 'ಧರ್ಮೋತ್ತೇಜಕ ಸಂಗಮ ಸಮಾವೇಶ'ದ 2ನೇ ದಿನದ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಸುಖ-ದುಃಖಗಳು ಹಗಲು-ರಾತ್ರಿ ಇದ್ದಂತೆ. ಸುಖದಲ್ಲಿ ಹಿಗ್ಗದೆ, ಕಷ್ಟದಲ್ಲಿ ಕುಗ್ಗದೆ ಬದುಕುವ ಪ್ರವೃತ್ತಿ ನಮ್ಮದಾಗಬೇಕು. ಬೇರು ಇಲ್ಲದಿದ್ದರೆ ಮರ ಉಳಿಯುವುದಿಲ್ಲ. ಹಾಗೆಯೇ ನಂಬಿಕೆ ಪರಸ್ಪರ ವಿಶ್ವಾಸ ಇಲ್ಲವಾದರೆ ಸಂಬಂಧಗಳು ಉಳಿಯುವುದಿಲ್ಲ. ಕರ್ಮವನ್ನು ಕಳೆದು, ಧರ್ಮವನ್ನು ಬಿತ್ತುವ ಮೂಲಕ ಬದುಕನ್ನು ಬಂಗಾರಗೊಳಿಸಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಅಂಗ ಅವಗುಣಗಳನ್ನು ಪರಿಹರಿಸಿ ಸಾತ್ವಿಕ ಬದುಕಿಗೆ ಅವರು ಕೊಟ್ಟ ತತ್ವ& ಸಿದ್ಧಾಂತಗಳು ಸಕಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.
ದೊಡ್ಡಗುಣಿ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವ್ಯಕ್ತಿಗೆ ಕೊಳೆ ಅಂಟಿದರೆ ಶುದ್ಧ ಮಾಡಬಹುದು. ಆದರೆ ವ್ಯಕ್ತಿತ್ವವೇ ಕೊಳಕಾಗಿದ್ದರೆ ತೊಳೆಯುವುದು ಬಲು ಕಷ್ಟ. ಬದುಕು ಎಷ್ಟು ಶ್ರೀಮಂತವಾಗಿದೆ ಅನ್ನುವುದಕ್ಕಿಂತ ಎಷ್ಟು ನೆಮ್ಮದಿಯಾಗಿದೆ ಎಂಬುದು ಮುಖ್ಯ. ವೀರಶೈವ ಲಿಂಗಾಯತ ಧರ್ಮದಲ್ಲಿ ಸದ್ಗುಣ ಸಂಸ್ಕಾರದಿಂದ ಬಲು ಎತ್ತರಕ್ಕೆ ಬೆಳೆಯಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಕಲ್ಲುಬಾಳು ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸದಾಶಯ ನುಡಿ ಸಲ್ಲಿಸಿದರು. ಎಡೆಯೂರು, ಸಂಗೊಳ್ಳಿ, ಸಿದ್ಧರಬೆಟ್ಟ, ನಾಗಲಾಪುರ ಮಠದ ಶ್ರೀಗಳು, ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಟಕದ ಅಧ್ಯ ಬೀರೂರು ಶಿವಸ್ವಾಮಿ, ಸಂಸ್ಥೆಯ ಸದಸ್ಯ ಚಂದ್ರಶೇಖರ ನಾಗರಾಳಮಠ, ಬಿಜೆಪಿ ಮುಖಂಡೆ ಮಂಜುಳಾ ವಿಜಯಕುಮಾರ್ ಇತರರಿದ್ದರು.