ಹುಣಸೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಗಣ್ಯರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಡಾ.ಎಸ್.ಯು.ಅಶೋಕ್, ನಿಂಗರಾಜ ಮಲ್ಲಾಡಿ, ನಿಲುವಾಗಿಲು ಪ್ರಭಾಕರ್ ಇತರರಿದ್ದರು. 
ಜಿಲ್ಲೆ

ರಾಮಾಯಣ ಹಿಂದುಗಳ ಪವಿತ್ರ ಗ್ರಂಥ

ಹುಣಸೂರು: ಭಾರತೀಯ ಪರಂಪರೆ, ಸಂಸ್ಕೃತಿಗಳ ಸಾಕ್ಷ್ಯರೂಪವಾಗಿ ರಾಮಾಯಣ ಗ್ರಂಥವನ್ನು ಮಹರ್ಷಿ ವಾಲ್ಮೀಕಿ ನೀಡಿದ್ದಾರೆ ಎಂದು ತಾಲೂಕು ನಾಯಕ ಸಂಘದ ಅಧ್ಯಕ್ಷ ಅಣ್ಣಯ್ಯನಾಯಕ ಬಣ್ಣಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಾಯಣ ಮತ್ತು ಮಹಾಭಾರತ ಹಿಂದುಗಳ ಪವಿತ್ರ ಗ್ರಂಥವಾಗಿವ. ಕುಟುಂಬ, ಸಮಾಜ, ಬದುಕು, ಆದರ್ಶಗಳ ಕುರಿತು ರಾಮಾಯಣ ಗ್ರಂಥದಲ್ಲಿ ಮಹರ್ಷಿ ವಾಲ್ಮೀಕಿ ಸುಂದರವಾಗಿ ಚಿತ್ರಿಸಿದ್ದಾರೆ. ವಾಲ್ಮೀಕಿ ಕುರಿತು ಅಧ್ಯಯನ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು. ದೇಶಪ್ರೇಮಿಗಳಾಗಿ ಹೋರಾಟ ನಡೆಸುವ ನಾಯಕ ಸಮಾಜದ ಏಳಿಗೆಗೆ ಸರ್ಕಾರ ಇನ್ನಷ್ಟು ಬೆಂಬಲ ನೀಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ರವಿಕುಮಾರ್, ನಿಲುವಾಗಿಲು ಪ್ರಭಾಕರ್, ನಗರಸಭಾ ಸದಸ್ಯ ಸತೀಶ್‌ಕುಮಾರ್, ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ಕಲ್ಕುಣಿಕೆ ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಬಿಇಒ ಎಸ್.ರೇವಣ್ಣ ಇತರರು ಹಾಜರಿದ್ದರು.