ಸಿಂದಗಿ : ಮಹರ್ಷಿ ವಾಲ್ಮೀಕಿ ಅವರು ಬರೆದ ಮಹಾಕಾವ್ಯ ರಾಮಾಯಣ ವಿಶ್ವಕ್ಕೆ ದೊಡ್ಡ ಜೀವನ ಸಂದೇಶ ಸಾರಿದೆ ಎಂದು ವಿಶ್ರಾಂತ ಪ್ರಾಚಾರ್ಯ ಐ.ಬಿ. ಬಿರಾದಾರ ಹೇಳಿದರು.
ನಗರದ ಹೊರ ವಲಯದಲ್ಲಿನ ಪಿಇಎಸ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮನ ಬದುಕು, ರಾವಣದ ವಿದ್ವತ್ತನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ರಾಮಾಯಣಕ್ಕಿದೆ. ಇಂತಹ ಮಹಾಕಾವ್ಯವು ನಮ್ಮನ್ನು, ನಮ್ಮ ಬದುಕನ್ನು ನಿರೂಪಿಸುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಬಿ.ಪಿ. ಕರ್ಜಗಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಚ್. ಸೋಮಾಪೂರ, ಪಿ.ಎಂ. ಮಡಿವಾಳರ, ಪ್ರಾ.ಜಿ.ಎಸ್. ಕಡಣಿ, ಆರ್.ಬಿ. ಗೋಡಕರ, ಉಪನ್ಯಾಸಕ ಅಮೀರ ಮೋಪಗಾರ ಇದ್ದರು.