ವಿಜಯಪುರ: ರಾಮಾಯಣ ಮತ್ತು ಮಹಾಭಾರತ ಎರಡು ಮಹಾಕಾವ್ಯಗಳು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಆದರ್ಶ ಮೌಲ್ಯ ಒಳಗೊಂಡಿರುವ ಮಹಾನ್ ಗ್ರಂಥಗಳು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಬಂದೇನವಾಜ ಕೊರಬು ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಹಾಗೂ ಕಸಾಪ ನಗರ ಘಟಕಗಳ ಸಂಯುಕ್ತಾಶ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ದತ್ತಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯ ಇಂದು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿ ನಿಂತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ವಿ.ಎಸ್. ಖಾಡೆ ಮಾತನಾಡಿ, ಕಸಾಪದಲ್ಲಿ ಪ್ರತಿ ಭಾನುವಾರ ಚಿಂತನಾತ್ಮಕ ದತ್ತಿಗೋಷ್ಠಿ ನಡೆಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸುವ ಕಾರ್ಯ ಮಾಡುತ್ತಿರುವುದು ಸ್ತುತ್ಯಾರ್ಹ ಎಂದು ಹೇಳಿದರು.
ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ರಾಮಾಯಣ ಮಹಾಕಾವ್ಯದ ಸಂದೇಶಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ರಾಮಾಯಣವು 24000 ಶ್ಲೋಕಗಳೊಂದಿಗೆ 7 ಕಾಂಡಗಳಲ್ಲಿ ರಚಿಸಲ್ಪಟ್ಟ ಸೂರ್ಯ ವಂಶದ ರಾಜಪುತ್ರ ರಾಮನ ಆದರ್ಶ ಗುಣಗಳನ್ನು ಪ್ರತಿಪಾದಿಸುತ್ತದೆ. ಪಿತೃವಾಕ್ಯ ಪರಿಪಾಲಕ ಹಾಗೂ ಏಕಪತ್ನಿ ವೃತಸ್ಥ ರಾಮನ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಇಂದು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾಸ್ಥೃ ಸಮಾಜದ ನಿರ್ಮಾಣ ಮಾಡೋಣ ಎಂದರು.
ಸಾಹಿತಿ ಭಾಗ್ಯಲಕ್ಷ್ಮಿ ಭಗವಂತಗೌಡರ ರಾಮಾಯಣದ ಹಿನ್ನೆಲೆಯಲ್ಲಿ ರಾಮನವಮಿಯ ಮಹತ್ವ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ರಾಮನ ಬದುಕು ನಮಗೆಲ್ಲ ಆದರ್ಶ, ಜಗತ್ತಿಗೆ ಮಾನವೀಯತೆ ಪಾಠ ಹೇಳಿಕೊಟ್ಟ ರಾಮನ ನಡತೆ, ಅರಿವು, ಪ್ರಜ್ಞೆಗಳ ಹಿನ್ನೆಲೆಯಲ್ಲಿ ರಾಮನವಮಿಯ ಮಹತ್ವವಾಗಿದೆ ಎಂದು ತಿಳಿಸಿದರು.
ಚಂದ್ರಶೇಖರ ದೇವರಡ್ಡಿ, ಶಶಿಧರ ಗಾಯಕವಾಡ, ಶ್ರೀಧರ ಗಾಯಕವಾಡ, ಭಾಗೀರಥಿ ಸಿಂಧೆ, ರಾಜೇಸಾಬ ಶಿವನಗುತ್ತಿ ವೇದಿಕೆಯಲ್ಲಿದ್ದರು. ಮಮತಾ ಮುಳಸಾವಳಗಿ ಸ್ವಾಗತಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಪರವೀನ ಶೇಖ ವಂದಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ, ಸಿದ್ರಾಮಯ್ಯ ಲಕ್ಕುಂಡಿಮಠ, ಅರ್ಜುನ ಶಿರೂರ, ಶಾಂತಪ್ಪ ರಾಣಾಗೋಳ, ಜಿ.ಎಸ್ ಬಳ್ಳೂರ, ಬಿ.ಎಂ. ಆಜೂರ, ಶಿವಲಿಂಗ ಶೆಟ್ಟೆಣ್ಣವರ, ಮೆಹತಾಬ ಕಾಗವಾಡ, ಶಾಂತಾ ವಿಭೂತಿ, ಬಿ.ವಿ. ಪಟ್ಟಣಶೆಟ್ಟಿ, ಲತಾ ವಾಲೀಕಾರ, ಸಿಮ್ರನ್ ವಾಲೀಕಾರ, ಗಂಗಮ್ಮ ರಡ್ಡಿ, ತೇಜಸ್ವಿನಿ ವಾಂಗಿ, ರಾಹುಲ್ ಚವಾಣ, ಡಾ. ಮೆಹಬೂಬ ಮಾಲಬಾವಡಿ, ಎ.ಎಚ್. ಕೌಜಲಗಿ, ದಿಲೀಪ ಪ್ರಭಾಕರ, ರಿಜ್ವಾನ್‌ಅಹ್ಮದ ಮುಲ್ಲಾ, ಖಾದರಬಾಷಾ ವಾಲೀಕಾರ, ಆರ್.ಎಂ. ದೊಡಮನಿ, ಶೋಭಾ ಬಡಿಗೇರ, ಎಸ್.ಜಿ. ಜಂಗಮಶೆಟ್ಟಿ, ಸಹನಾ ಬಿರಾದಾರ, ಸನ್ನಿಧಿ ಬಿರಾದಾರ, ಲಕ್ಷ್ಮಿ ಬಿರಾದಾರ ಮತ್ತಿತರರಿದ್ದರು.