ಜಿಲ್ಲೆ

ರಾಮಸ್ವಾಮಿ ಅವರ 75ನೇ ಹುತಾತ್ಮ ದಿನ ಆಚರಣೆ

ಮೈಸೂರು: ಮೈಸೂರು ಸಂಸ್ಥಾನದ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಡಿ ಪ್ರಾಣಬಿಟ್ಟ ರಾಮಸ್ವಾಮಿ ಅವರ 75ನೇ ಹುತಾತ್ಮ ದಿನವನ್ನು ಮಂಗಳವಾರ ವಿವಿಧ ಸಂಘಟನೆಗಳು ಆಚರಿಸಿದವು.
ಯುವ ಭಾರತ್ ಸಂಘಟನೆ ನಗರದ ರಾಮಸ್ವಾಮಿ ವೃತ್ತದಲ್ಲಿ ಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ರಾಮಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.


ಶಾಸಕ ಎಲ್.ನಾಗೇಂದ್ರ ಮಾತನಾಡಿ, ರಾಮಸ್ವಾಮಿ ವೃತ್ತ ಮೈಸೂರಿನಲ್ಲಿ ಜನಪ್ರಿಯವಾಗಿದ್ದು, ಅದರ ಇತಿಹಾಸವನ್ನು ಯುವಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಪ್ರಜಾಪ್ರಜಾಪ್ರಭುತ್ವದ ಸ್ವಾತಂತ್ರ್ಯಕ್ಕೆ ಮಡಿದ ರಾಮಸ್ವಾಮಿ ಅವರ ಮಾಹಿತಿಯ ನಾಮಫಲಕವನ್ನು ವೃತ್ತದ 5 ರಸ್ತೆಯ ಬದಿಗಳಲ್ಲಿ ಅನಾವರಣಗೊಳಿಸಲಾಗುವುದು ಎಂದರು.


ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು, ಎಂಡಿಎ ಸದಸ್ಯ ನವೀನ್‌ಕುಮಾರ್, ಯುವ ಭಾರತ್ ಸಂಘಟನೆ ಸಂಚಾಲಕ ಅಜಯ್ ಶಾಸ್ತ್ರಿ, ವೀರ ಸಾವರ್ಕರ್ ಸಂಘದ ಅಧ್ಯಕ್ಷ ರಾಕೇಶ್ ಭಟ್, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ.ರಾಮಕೃಷ್ಣ, ಮುಖಂಡರಾದ ವಿಜಯ್‌ಕುಮಾರ್, ನವೀನ್, ರವಿಶಾಸ್ತ್ರಿ, ರಂಗನಾಥ್ ಇದ್ದರು.


ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ರಾಮಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಬಿ.ಜೆ. ಸುಭಾಷ್,ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಕಲಾ, ಆಸಿಯಾ ಬೇಗಂ ಮೊದಲಾದವರು ಇದ್ದರು.