ಜಿಲ್ಲೆ

114 ಲಾನುಭವಿಗಳಿಗೆ 1.29 ಕೋಟಿ ರೂ. ಕೃಷಿ ಸಾಲ 29 ಪತ್ತಿನ ಸಹಕಾರ ಸಂಗಳ ಮೂಲಕ ವಿತರಣೆ

ಕನಕಪುರ: ಸಾತನೂರು ಹೋಬಳಿ ಅಚ್ಚಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸಾಲ ಸೌಲಭ್ಯದ ಚೆಕ್​ ವಿತರಣಾ ಸಮಾರಂಭವನ್ನು ಸಂಸದ ಡಿ.ಕೆ.ಸುರೇಶ್​ ನೆರವೇರಿಸಿದರು.

ಬಿಡಿಸಿಸಿ ಬ್ಯಾಂಕ್​ನಿಂದ 144 ಫಲಾನುಭವಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ 1 ಕೋಟಿ 29 ಲಕ್ಷದ 30 ಸಾವಿರ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸಲಾಗಿದೆ ಎಂದು ಡಿ.ಕೆ. ಸುರೇಶ್​ ತಿಳಿಸಿದರು. ವಿಧಾನ ಪರಿಷತ್​ ಸದಸ್ಯ ಎಸ್​. ರವಿ ಮಾತನಾಡಿ, ತಾಲೂಕಿನ 29 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳ ಮೂಲಕ 110 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ವಿತರಿಸಲಾಗಿದೆ.

ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಸಂದ ಅಭಿವೃದ್ಧಿಯ ಜತೆ ರೈತರೂ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು. ಮುಖಂಡರಾದ ಎಂ.ಡಿ. ವಿಜಯದೇವ್​, ಡಿ.ಎಂ.ವಿಶ್ವನಾಥ್​, ಎಸ್​.ಎಸ್​.ಶಂಕರ್​, ಗ್ರಾಪಂ ಅಧ್ಯೆ ಶಿವಮ್ಮ, ಸುರೇಶ್​, ಏಳಗಳ್ಳಿ ರವಿ, ಕೃಷ್ಣಪ್ಪ, ಬೆಟ್ಟೇಗೌಡ ಹಲವರು ಉಪಸ್ಥಿತರಿದ್ದರು.