ಪುತ್ತೂರು: ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದಾಗ ಅದನ್ನು ಬೋಗಸ್ ಎಂದವರು, ಜಾರಿಗೆ ತರಲು ಮುಂದಾದಾಗ ಬಿಟ್ಟಿ ಭಾಗ್ಯವೆಂದರು. ಆದರೆ ನಮ್ಮದು ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಕಟ್ಟುವ ಗ್ಯಾರಂಟಿಗಳು ಜನರ ಕೈ ಸೇರಿದೆ. ಮೋದಿ ಹೇಳುವ ಗ್ಯಾರಂಟಿ ಕೇವಲ ಅವರ ಬಾಯಲ್ಲಿ ಮಾತ್ರ ಉಳಿದಿದ್ದು, ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುವುದೇ ದೊಡ್ಡ ಸಾಧನೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ ಹೇಳಿದರು.
ಕಾಂಗ್ರೆಸ್‌ನಲ್ಲಿದ್ದಾಗ ಭ್ರಷ್ಟಾಚಾರಿಗಳೆಂದು ಆರೋಪಕ್ಕೊಳಗಾದವರು, ಬಿಜೆಪಿಗೆ ಸೇರಿಸಿದ ಬಳಿಕ ಆರೋಪ ಮುಕ್ತವಾಗಿದ್ದಾರೆ. ಬಿಜೆಪಿ ಎಂಬ ವಾಷಿಂಗ್ ಮೆಷಿನ್‌ನಲ್ಲಿ ಭ್ರಷ್ಟರೆಲ್ಲ ಶುಭ್ರರಾಗುತ್ತಿದ್ದಾರೆ. ಮೋದಿ ಕಳೆದ 10 ವರ್ಷದಲ್ಲಿ ಭಾಷಣ ಮಾಡಿ, ಸಾಕಷ್ಟು ಭರವಸೆ ನೀಡಿದ್ದಾರೆ. ಹಿಂದಿನ ಅವರ ಮಾತುಗಳನ್ನು ಕೇಳಿದರೆ ಅವರೇ ಮತ ಕೊಡ್ಲಿಕ್ಕಿಲ್ಲö. ಕರ್ನಾಟಕದಲ್ಲಿ ಹಿಂದಿನ ಅವಧಿಯ ಸಿದ್ದರಾಮಯ್ಯ ಸರ್ಕಾರ ಪ್ರನಾಳಿಕೆಯಲ್ಲಿ ಹೇಳಿದ ಶೇ. 99 ಭರವಸೆ ಈಡೇರಿಸಿದೆ. ಈ ಬಾರಿಯೂ ನೀಡಿದ ಭರವಸೆಯನ್ನು ಪೂರ್ಣಗೊಳಿಸಲಿದೆ. ಬಿಜೆಪಿ ಕಾಂಗ್ರೆಸ್ ಪಕ್ಷ 60 ವರ್ಷ ಏನು ಮಾಡಿದೆ ಕೇಳುತ್ತಿದ್ದು, ಮೋದಿ ಅವರು ಮಾರಿದ ಸಂಸ್ಥೆಗಳ ಪಟ್ಟಿ ನೋಡಿದರೆ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂಬುದು ತಿಳಿಯುತ್ತದೆ ಎಂದು ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
ದಕ್ಷಿಣ ಕನ್ನಡದಲ್ಲಿ ಬೆನಗಲ್ ಶಿವರಾಯರು, ಕೆ.ಆರ್. ಆಚಾರ್, ಸಿ.ಎಂ. ಪೂಣಚ್ಚö, ಶಂಕರ ಆಳ್ವಾö, ಕೆ.ಕೆ. ಶೆಟ್ಟಿö, ಜನಾರ್ದನ ಪೂಜಾರಿ ಮಾಡಿದ ಅಭಿವೃದ್ಧಿ ಕಾರ್ಯ, ಶ್ರೀನಿವಾಸ ಮಲ್ಯರಂಥ ಕಾಂಗ್ರೆಸ್ ನಾಯಕ ಜಿಲ್ಲೆಗೆ ತಂದ ಯೋಜನೆ ಈಗಲೂ ಜಿಲ್ಲೆಯಲ್ಲಿ ಕಾಣುತ್ತಿದೆ. ಆದರೆ 33 ವರ್ಷದಲ್ಲಿ ಬಿಜೆಪಿ ಸಂಸದರು ತಂದ ಒಂದೇ ಒಂದು ದೊಡ್ಡ ಯೋಜನೆ ಇದ್ದರೆ ಹೇಳಲಿ. ಈಗ ನಡೆಯುತ್ತಿರುವ ಬಂಟ್ವಾಳ- ಹಾಸನ ಹೆದ್ದಾರಿ ಅಗಲೀಕರಣ ಕೂಡ ಆಸ್ಕರ್ ಫರ್ನಾಂಡಿಸ್ ಸಚಿವರಾಗಿದ್ದಾಗ ಮಂಜೂರಾಗಿದ್ದುö. ಜಿಲ್ಲೆಯ ಹೆಗ್ಗುರುತುಗಳಾಗಿದ್ದ ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ಗಳನ್ನು ಗುಜರಾತಿನ ಬ್ಯಾಂಕ್‌ಗಳ ಜತೆ ವಿಲೀನ ಮಾಡಿ ದಕ್ಷಿಣ ಕನ್ನಡಕ್ಕೆ ಮೋಸ ಮಾಡಿದ್ದು ಮಾತ್ರ ಮೋದಿ ಸಾಧನೆ. ಯಾರೂ ಸತ್ತರೂ, ಯಾರು ಜಗಳ ಮಾಡಿಕೊಂಡರೂ ಪರ್ವಾಗಿಲ್ಲö. ನಮಗೆ ಓಟು ಬರಬೇಕು ಎನ್ನುವುದು ಬಿಜೆಪಿಯ ಸಿದ್ಧಾಂತ ಎಂದು ಹೇಳಿದರು.
ಕಾಂಗ್ರೆಸ್ ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ನಗರ ಬ್ಲಾಕ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಕ್ಷೇತ್ರದ ಚುನಾವಣಾ ಪ್ರಚಾರ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿö, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು.