ಜಿಲ್ಲೆ

ಮಗ್ಗಗಳಿಗೆ ವಿದ್ಯುತ್ ರಿಯಾಯಿತಿ ರದ್ಧುಪಡಿಸಬೇಡಿ ಸಂಘಟನೆಗಳ ಎಚ್ಚರಿಕೆ

ರಾಮನಗರ : ಸರ್ಕಾರದ ಗಮನ ಸೆಳೆಯುವ ಸಲುವಾಗಿ ವಿದ್ಯುತ್ ರಿಯಾಯಿತಿ ರದ್ದುಪಡಿಸಿರುವುದರ ವಿರುದ್ಧ  ನಗರದ ವಿಜಯನಗರದ ಕೃಷ್ಣಸ್ಮತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ವಿದ್ಯುತ್‌ ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಿಕೆ ನೇಕಾರರ ಸಂಘಟನೆಗಳು ಟ್ವಿಸ್ಟರ್ ಮತ್ತು ವೀವರ್ಸ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಸಭೆ ನಡೆಸಿದರು.

ರಾಜ್ಯದಲ್ಲಿ ನೇಕಾರರು ಮತ್ತು ಮಗ್ಗಪೂರ್ವ ಚಟುವಟಿಕೆ ನಡೆಸುತ್ತಿರುವ ನೇಕಾರ ವೃತ್ತಿ ಮಾಡುತ್ತಿರುವ ಕೋಟ್ಯಾಂತರ ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ವಿದ್ಯುತ್ ರಿಯಾಯಿತಿಯನ್ನು ರದ್ದುಪಡಿಸಿ 10 ಎಚ್‌ಪಿವರೆಗಿನ ಮಗ್ಗ ಮತ್ತು ಮಗ್ಗಪೂರ್ವ ಚಟುವಟಿಕೆಗಳಿಗೆ 250 ಯುನಿಟ್‌ವರೆಗೆ ಉಚಿತವೆಂದು ಘೋಸಿರುವುದು ಸರಿಯಲ್ಲ.

ಸರ್ಕಾರ ಸಬ್ಸಿಡಿ ನಿಲ್ಲಿಸಿದರೆ ರಾಜ್ಯದಲ್ಲಿರುವ ಕೋಟ್ಯಾಂತರ ನೇಕಾರರು ಮತ್ತು ಅವಲಂಬಿತ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಸರ್ಕಾರ ಮತ್ತು ಇಲಾಖೆ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯ. ಈ ಹಿಂದೆ ಇದ್ದ ರೀತಿಯಲ್ಲಿ ವಿದ್ಯುತ್ ರಿಯಾಯಿತಿ ಹಾಗೂ ಈಗಿನ 250 ಯುನಿಟ್ ವಿದ್ಯುತ್‌ನ್ನು ಸಹ ಮುಂದುವರೆಸಿ ನೇಕಾರರಿಗೆ ಹಲವು ಸವಲತ್ತುಗಳನ್ನು ಕಲ್ಪಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಸಂಘದ ಪದಾಧಿಕಾರಿಗಳು ಈ ವೇಳೆ ಆಗ್ರಹಿಸಿದರು.

ಜೈ ಭಾರತ್ ಪವರ್‌ಲೂಂ ವೀವರ್ಸ್‌ ಕೋ-ಆಪರೆಟಿವ್ ಸೊಸೈಟಿ ಅಧ್ಯಕ್ಷ ಟಿ.ರಂಗರಾಜು, ಎ.ಎಸ್.ಕೃಷ್ಣಮೂರ್ತಿ, ಮಹಮದ್ ಸಲಾಂ ಉಲ್ಲಾ ಮೋಹಿಸಿನ್ ಹಾಲಿ ಖಾನ್,  ನೂರುಲ್ಲಾಖಾನ್, ವೆಂಕಟೇಶ್‌ ಕುಮಾರ್, ರಾಜಣ್ಣ, ಜಮೀಲ್  ಅಹಮದ್. ಮುಸ್ತಾಪ್‌ ಪಾಷ, ತನ್ವಿರ್‌ ಖಾನ್‌ ಮತೀನ್, ಮುದ್ದುಷಾ ಇದ್ದರು.