ಜಿಲ್ಲೆ

ರಾಮನಗರದಲ್ಲಿ ದಾಖಲೆಯ ಶೇ.85.04 ರಷ್ಟು ಮತದಾನ

ಗಂಗಾಧರ ಬಿ ವಿ

ರಾಮನಗರ: ಜಿಲ್ಲೆಯಾಧ್ಯಂತ ದಾಖಲೆಯ ಶೇ.85. 04 ಮತದಾನವಾಗಿದೆ. 2013- ವಿಧಾನಸಭೆ ಚುನಾವಣೆಗೆ ಬುಧವಾರ ನಡೆದ ಮತದಾನದಲ್ಲಿ ಜಿಲ್ಲೆಯಾಧ್ಯಂತ ಬಿರುಸಿನ ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಹೆಚ್ಚು ಮತದಾನವಾಗಿದೆ. ಅಲ್ಲದೆ ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾನ ನಡೆದ ಜಿಲ್ಲೆಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಮಾಗಡಿಯಲ್ಲಿ ಶೇ. 86.18ರಷ್ಟು ಮತದಾನವಾಗಿ ಹೆಚ್ಚಿನ ಮತದಾನವಾದ ಕ್ಷೇತ್ರವಾಗಿದ್ದರೆ, ಅತಿ ಕಡಿಮೆ ಎಂದರೆ ರಾಮನಗರದಲ್ಲಿ ಶೇ.84.09ರಷ್ಟು ಮತದಾನವಾಗಿದೆ. ಉಳಿದಂತೆ ಚನ್ನಪಟ್ಟಣದಲ್ಲಿ ಶೇ. 85.27 ಮತ್ತು ಕನಕಪುರದಲ್ಲಿ ಶೇ.84.52 ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿದ್ದ 904702 ಮತಗಳಲ್ಲಿ 769338 ಮತಗಳು ಚಲಾವಣೆಯಾಗಿವೆ. ಚಲಾವಣೆಯಾದ ಒಟ್ಟು ಮತಗಳಲ್ಲಿ 385674 ಮಹಿಳೆಯರು ಮತ್ತು 382580 ಪುರುಷರು ಹಾಗೂ 21 ಮಂದಿ ಇತರೆ ವರ್ಗದ ಮತದಾರರು ತಮ್ಮ ಹಕ್ಕು ಚಲಾನವಣೆ ಮಾಡಿದ್ದಾರೆ.

ದಾಖಲೆ ಮತದಾನ: ಜಿಲ್ಲೆಯ ನಾಲ್ಕೂ ಕ್ಷೇತ್ರಗಳ ಚುನಾವಣೆ ಇತಿಹಾಸವನ್ನು ಗಮನಿಸಿದರೆ, ಈ ಬಾರಿ ದಾಖಲೆ ಮತದಾನ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಒಟ್ಟು ಶೇ 84.55ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿ ಇದು ಶೇ 85.04ಕ್ಕೆ ಏರಿಕೆಯಾಗಿದೆ. ಈ ಬಾರಿಯೂ ಉತ್ತಮ ಪ್ರಮಾಣದಲ್ಲಿ ಮತ ಚಲಾವಣೆ ಆಗಲು ಜಿಲ್ಲಾಢಳಿತ ಮತ್ತು ರಾಜಕೀಯ ಪಕ್ಷಗಳು ಸಹ ಅಷ್ಟೇ ಗಮನ ಹರಿಸಿದ ಪರಿಣಾಮ, ಹಾಗೂ ಚುನಾವಣಾ ಆಯೋಗದ ಮತದಾರ ಸ್ನೇಹಿ ನಿಲುವುಗಳು ಕಾರಣವಾಗಿವೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ಇನ್ನು ರಾಮನಗರ, ಮಾಗಡಿ ಮತ್ತು ಕನಕಪುರದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದ ಮತದಾನ ನಡೆದಿದೆಯಾದರೂ, ಚನ್ನಪಟ್ಟಣದಲ್ಲಿ ಮಾತ್ರ ಇದರ ಪ್ರಮಾಣ ಕಡಿಮೆ ಆಗಿದೆ. 2018ರ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಒಟ್ಟಾರೆ ಶೇ.86.32ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿ ಇದರ ಪ್ರಮಾಣ ಶೇ. 1.05ರಷ್ಟು ಮತದಾನ ಕಡಿಮೆ ಆಗಿದೆ.

ಹಿಂದಿನ ಚುನಾವಣೆಗಳ ಶೇಖಡವಾರು ಮತದಾನ ಪ್ರಮಾಣ

ಕ್ಷೇತ್ರ        2023     2018     2013      2008

ಮಾಗಡಿ     86.18    85.83    83.57     77.06

ರಾಮನಗರ  84.09    82.55    80.30     73.44

ಕನಕಪುರ    84.52    83.40    83.37     76.23

ಚನ್ನಪಟ್ಟಣ   85.27    86.32    84.48     77.86

ಒಟ್ಟಾರೆ      85.04    84.55     82.99    76.19

--