ಜಿಲ್ಲೆ

ಮೇ 10ರಂದು ತಪ್ಪದೇ ಮತ ಚಲಾಯಿಸಿ: ಇಓ ಪ್ರದೀಪ್​

ಗಂಗಾಧರ ಬಿ ವಿ

ರಾಮನಗರ: ಮೇ. 10ರಂದು ನಡೆಯುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಮತದಾನ ಮಾಡುವಂತೆ ವಂಡರ್​ ಲಾ ಪ್ರವಾಸಿಗರಿಗೆ ರಾಮನಗರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್​ ಕರೆ ನೀಡಿದರು.

ಶನಿವಾರ ರಾಮನಗರ ಜಿಲ್ಲಾ ಸ್ವಿಪ್​ ಸಮಿತಿ, ಬನ್ನಿಕುಪ್ಪೆ ಬಿ ಗ್ರಾಮ ಪಂಚಾಯತಿ ಹಾಗೂ ವಂಡರ್​ ಲಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮತದಾನದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೇ. 10 ರಂದು ಮತ ಚಲಾಯಿಸಿ ಬರುವ ಪ್ರವಾಸಿಗರಿಗೆ ಸಂಸ್ಥೆಯ ವತಿಯಿಂದ ರಿಯಾಯಿತಿ ನೀಡಲಾಗುವುದು ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ನಂತರ ಮತದಾನದ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಸ್ವ ಸಹಾಯ ಸಂಘದ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು ರಂಗೋಲಿ ಬಿಡಿಸುವ ಮೂಲಕ ಮತದಾನದ ಬಗ್ಗೆ ತಿಳಿಸಿದರು ಉತ್ತಮವಾಗಿ ರಂಗೋಲಿ ಬಿಡಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಸೆಲ್ಫಿ ಸ್ಟ್ಯಾಂಡ್​ ಮೂಲಕ ಪ್ರವಾಸಿಗರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ವಂಡರ್​ ಲಾ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ಗ್ರಾಮ ಪಂಚಾಯಿತಿ ಸದಸ್ಯರು, ಸ್ವಸಹಾಯ ಸಂಘದ ಮಹಿಳೆಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಜಿಲ್ಲಾ ಐಇಸಿ ಸಂಯೋಜಕರು, ತಾಲೂಕು ಐಇಸಿ ಸಂಯೋಜಕರು, ಎನ್​ ಆರ್​ ಎಲ್​ ಎಂ ಸಿಬ್ಬಂದಿಗಳು ಉಪಸ್ಥಿತರಿದ್ದರು.