ರಾಮನಗರ: ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಕೋರಿಕೆ ಗಣಕೀಕೃತ ಕೌನ್ಸಿಲಿಂಗ್ ಮಂಗಳವಾರದಿಂದ ಎರಡು ದಿನಗಳ ಕಾಲ ನಡೆಯಲಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದು, ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ಕೌನ್ಸಲಿಂಗ್ ನಡೆಯಲಿದೆ. ಮಂಗಳವಾರ ಮತ್ತು ಬುಧವಾರ ನಗರದ ಗುರುಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಕೌನ್ಸಿಲಿಂಗ್ ನಡೆಯಲಿದೆ.
ಕೋರಿಕೆ ವರ್ಗಾವಣೆಯ ಅಂತಿಮ ಆಧ್ಯತಾ ಪಟ್ಟಿಯಲ್ಲಿರುವ ಕ್ರಮಸಂಖ್ಯೆ 1ರಿಂದ 250ರವರೆಗೆ ಇರುವ ಶಾಲಾ ಶಿಕ್ಷಕರು ಕೌನ್ಸಲಿಂಗ್ ನಲ್ಲಿ ಹಾಜರಾಗಲು ಸೂಚಿಸಲಾಗಿದೆ. ಬುಧವಾರ ಜು.12ರಂದು ಜೇಷ್ಠತಾ ಪಟ್ಟಿಯಲ್ಲಿ 251-672ರವರೆಗೆ ಇರುವ ಶಿಕ್ಷಕರು ಕೌನ್ಸಲಿಂಗ್ ನಲ್ಲಿ ಪಾಲ್ಗೊಳ್ಳಬೇಕಿದೆ.