ಜಿಲ್ಲೆ

ತಾವರೆಕರೆ ಪೊಲೀಸರದಿಂದ ಸರಗಳ್ಳರ ಸೆರೆ

ಮಾಗಡಿ: ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಕಳ್ಳರನ್ನು ಬಂಧಿಸುವಲ್ಲಿ ತಾವರೆಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ವರ್ತೂರು

ಸಮೀಪದ ಬಿ. ಸ್ಟೀವನ್ (38) ಹಾಗೂ ಗೋರಿಪಾಳ್ಯದ ಎಂ. ಮೋಹನ್‌ಕುಮಾರ್ (40) ಬಂಧಿತರು. ತಾವರೆಕೆರೆ ಠಾಣೆ ವ್ಯಾಪ್ತಿಯ ಮಾಗಡಿಮುಖ್ಯರಸ್ತೆಯ ಸುರೇಶ್ ಲೇಔಟ್ ಬಳಿ ಎಚ್.ಆರ್. ಶ್ರುತಿ ಎಂಬುವರು ನಡೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಇಬ್ಬರು ದುಷ್ಕರ್ಮಿಗಳು ಆಕೆಯ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಶ್ರುತಿ ತಾವರೆಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ 2.50 ಲಕ್ಷ ರೂ. ಮೌಲ್ಯದ 50 ಗ್ರಾಂನ ಎರಡು ಚಿನ್ನದ ಸರ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಮಹ್ಮದ್ ಅಲ್ಲಾವುದ್ದೀನ್, ಎಂ.ಭಾಸ್ಕರ್, ಸಿಬ್ಬಂದಿ ಮಂಜುನಾಥ್, ಹೇಮಂತ್ ಕುಮಾರು, ಶರಣಪ್ಪ, ತಿಪ್ಪೆಸ್ವಾಮಿ, ಮಂಜುನಾಥ್, ಶ್ರೀನಿವಾಸ್ ಇದ್ದರು.