ಗಂಗಾಧರ್ ಬೈರಾಪಟ್ಟಣ
ರಾಮನಗರ: ಪೂರ್ವ ಸಿದ್ಧತಾ ಪರೀಕ್ಷೆಗೆ ಸ್ಥಳಿಯ ಮಟ್ಟದಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿಕೊಳ್ಳಲು ಸೂಚಿಸಿರುವುದೂ ಅಲ್ಲದೆ, ಪ್ರತಿ ವಿದ್ಯಾರ್ಥಿಯಿಂದ 60 ರೂ. ಪರೀಕ್ಷಾ ಶುಲ್ಕ ವಸೂಲಿಗೆ ಮುಂದಾಗಿರುವ ರಾಜ್ಯ ಪರೀಕ್ಷೆ ಮತ್ತು ಮೌಲ್ಯ ರ್ನಿಣಯ ಮಂಡಳಿ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಪ್ರತಿ ವರ್ಷ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ರಾಜ್ಯಮಟ್ಟದಲ್ಲಿಯೇ ನಡೆಸುತ್ತಿದ್ದ ಮಂಡಳಿ, ಈ ಬಾರಿ ಹೆಸರಿಗೆ ಮಾತ್ರ ರಾಜ್ಯಮಟ್ಟದ ಪರೀಕ್ಷೆ ಮಾಡುತಿದ್ದು, ಸ್ಥಳಿಯವಾಗಿಯೇ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿಕೊಂಡು ಪರಿಕ್ಷೆ ನಡೆಸುವಂತೆ ಸೂಚನೆ ನೀಡಿದೆ. ರಾಜ್ಯದಲ್ಲಿ ಈ ಸಾಲಿನಲ್ಲಿ ಸುಮಾರು 5&6 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸಲಿದ್ದು, ಫೆ.23ರಿಂದ ಪರೀಕ್ಷೆ ಆರಂಭಗೊಳ್ಳಲಿದೆ.
ಬಿಇಓ ಮೂಲಕ ಪತ್ರಿಕೆ: ವಿದ್ಯಾರ್ಥಿಗಳ ಪಾಲಿಗೆ ಪ್ರಮುಖ ಟ್ಟವಾಗಿರುವ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಯನ್ನು ಪ್ರತಿ ವರ್ಷ ಪರೀಕ್ಷಾ ಮಂಡಳಿಯೇ ಸಿದ್ಧಪಡಿಸಿ ನೀಡುತ್ತಿತ್ತು. ಈ ಮೂಲಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಏಕ ಪರೀಕ್ಷೆ ಎದುರಿಸುವ ಮೂಲಕ ಸಿದ್ಧಗೊಳ್ಳುತ್ತಿದ್ದರು. ಆದರೆ ಈ ಬಾರಿ ಇದಕ್ಕೆ ವ್ಯತಿರಿಕ್ತ ನಿರ್ಧಾರ ಕೈಗೊಂಡಿರುವ ಮಂಡಳಿ, ಹೆಸರಿಗೆ ಮಾತ್ರ ರಾಜ್ಯ ಮಟ್ಟದ ಪರೀಕ್ಷೆ ಎಂದು ಹೇಳಿ, ತಾನೇ ನೀಡಿರುವ ಮಾದರಿಗೆ ಅನುಗುಣವಾಗಿ ಸ್ಥಳಿಯವಾಗಿಯೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿಕೊಂಡು ಪರೀಕ್ಷೆ ನಡೆಸುವಂತೆ ಸೂಚನೆಯನ್ನು ನೀಡಿದೆ.
ವಿದ್ಯಾರ್ಥಿಗಳ ಸುಲಿಗೆ : ಈ ಬಾರಿಯ ಪೂರ್ವ ಸಿದ್ಧತಾ ಪರೀಕ್ಷೆಗಾಗಿ ಪ್ರತಿ ವಿದ್ಯಾರ್ಥಿಗಳಿಂದ ತಲಾ 60 ರೂ.ಗಳನ್ನು ಶುಲ್ಕವಾಗಿ ವಸೂಲಿ ಮಾಡುವಂತೆಯೂ ಮಂಡಳಿ ಸೂಚಿಸಿದೆ. ಆದರೆ ವಿದ್ಯಾರ್ಥಿಗಳು ನೀಡುವ 60 ರೂಪಾಯಿಗಳು ಕೇವಲ ಪ್ರಶ್ನೆ ಪತ್ರಿಕೆಗಾಗಿ ಮಾತ್ರವಾಗಿದ್ದು, ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗಳೇ ತರಬೇಕಿದೆ. 4 ಪುಟದ 6 ವಿಷಯಗಳ ಪ್ರಶ್ನೆ ಪತ್ರಿಕೆಗಳಿಗೆ ಇಷ್ಟೊಂದು ಹಣವನ್ನು ವಸೂಲಿ ಮಾಡುವ ಅಗತ್ಯವಾದರೂ ಏನಿದೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಇನ್ನು ವಿದ್ಯಾರ್ಥಿಗಳಿಂದ ಸಂಗ್ರಹ ಮಾಡುವ ಹಣ ಬಿಇಓ ಖಾತೆಗೆ ಜಮೆ ಆಗುತ್ತದೆ. ಆದರೆ ಈ ಹಣಕ್ಕೆ ಲೆಕ್ಕ ನೀಡುವವರು ಯಾರೂ, ಇದರಲ್ಲಿ ಸಾಕಷ್ಟು ಹಣ ದುರುಪಯೋಗ ಸಾಧ್ಯತೆಯೂ ಇದೆ.
ಗುಣಮಟ್ಟಕ್ಕೆ ಕೊರತೆ: ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಈಗ ಬಿಇಓ ವ್ಯಾಪ್ತಿಗೆ ಇಳಿಸಿರುವ ಮಂಡಳಿ ಕ್ರಮ ಶಿಕ್ಷಕ ವೃಂದವನ್ನು ಕೆರಳಿಸಿದೆ. ಇಲಾಖೆಯೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ, ಇವುಗಳನ್ನು ಮಂಡಳಿ ನಿಯಮಗಳಿಗೆ ಅನುಸಾರ ಗೌಪ್ಯತೆಯನ್ನು ಕಾಪಾಡಿಕೊಂಡು ಪರೀಕ್ಷೆ ದಿನದಂದು ವಿದ್ಯಾರ್ಥಿಗಳಿಗೆ ನೀಡಿದ್ದರೆ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದಾಗಿತ್ತು. ಆದರೆ ಸ್ಥಳಿಯ ಮಟ್ಟದಲ್ಲಿಯೇ ಸಿದ್ದಗೊಳ್ಳುವ ಪ್ರಶ್ನೆ ಪತ್ರಿಕೆ ಸಿದ್ಧತೆ ಗುಣಮಟ್ಟ ಹಾಗೂ ಮಾನದಂಡ ಎರಡೂ ಮಕ್ಕಳ ಪಾಲಿಗೆ ಮಾರಕವಾಗುವುದು ಎನ್ನುವ ಆತಂಕ ಪಾಲಕರು ಮತ್ತು ಶಿಕ್ಷಕ ವೃಂದದಲ್ಲಿ ಇದೆ.
ಕಡೆಗಣನೆ: ರಾಜ್ಯ ಪರೀಕ್ಷೆ ಮತ್ತು ಮೌಲ್ಯ ರ್ನಿಣಯ ಮಂಡಳಿ ಯಾವುದೇ ಪ್ರಮುಖ ರ್ನಿಣಯವನ್ನು ಕೈಗೊಳ್ಳುವ ಮುನ್ನಾ ಪ್ರೌಢಶಾಲೆ ಮುಖ್ಯಶಿಕ್ಷಕರ ಸಂ, ಸಹ ಶಿಕ್ಷಕರ ಸಂ ಸೇರಿದಂತೆ ಇತರೆ ಸಂಗಳ ಸಭೆಯನ್ನು ಕರೆದು ಸಾಧಕ ಬಾದಕಗಳನ್ನು ಚರ್ಚಿಸಿ ರ್ನಿಣಯವನ್ನು ಕೈಗೊಳ್ಳುತ್ತದೆ. ಆದರೆ ರಾಜ್ಯಮಟ್ಟದ ಪರೀಕ್ಷೆಯನ್ನು , ಸ್ಥಳಿಯ ಮಟ್ಟಕ್ಕೆ ಇಳಿಸುವ ಮುನ್ನಾ ಹಾಗೂ ಶುಲ್ಕ ವಸೂಲಾತಿಗೆ ಆದೇಶ ಮಾಡುವ ಮುನ್ನಾ ಏಕ ಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸಹ ಶಿಕ್ಷಣ ವಲಯದಲ್ಲಿ ಹಲವು ಅನುಮಾನಗಳು ಮೂಡುವಂತೆ ಮಾಡಿದೆ.
ಮಂಡಳಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಸ್ಥಳಿಯವಾಗಿ ಸಿದ್ದಪಡಿಸಿಕೊಳ್ಳಿ ಎಂದು ಸೂಚನೆ ನೀಡಿರುವುದು ಏಕ ಪಕ್ಷೀಯವಾಗಿದೆ. ಇದು ಪರೀಕ್ಷೆ ಗೌಪ್ಯತೆ ಮತ್ತು ಗುಣಮಟ್ಟದ ಮೇಲೆ ಹೊಡೆತ ನೀಡಲಿದೆ. ಇದರ ವಿರುದ್ಧ ಇಲಾಖೆಯ ಪ್ರಮುಖರಿಗೆ ಮನವಿ ನೀಡಲಾಗುವುದು.
ಸಿದ್ಧಬಸಪ್ಪ,
ರಾಜ್ಯಾಧ್ಯಕ್ಷರು, ಸಹ ಶಿಕ್ಷಕರ ಸಂ.