ರಾಮನಗರ: ಅಪ್ರಾಪ್ತ ಬಾಲಕಿಗೆ ಲೈಗಿಂಕ ದೌರ್ಜನ್ಯ ನಡೆಸಿದ ಆಟೋ ಚಾಲಕನೊಬ್ಬ ಪೊಲೀಸರ ಅಥಿತಿಯಾಗಿದ್ದಾನೆ.
ಪ್ರತಿ ದಿನ 8 ವರ್ಷದ ಬಾಲಕಿಯನ್ನು ಆಕೆಯ ಮನೆಯಿಂದ ಶಾಲೆಗೆ ಕರೆದುಕೊಂಡು ಬರುತ್ತಿದ್ದ ಆಟೋ ಚಾಲಕ ಲೈಗಿಂತ ದೌರ್ಜನ್ಯ ನಡೆಸುತ್ತಿದ್ದ ಚಾಲಕ, ಈ ವಿಷಯವನ್ನು ಮನೆಯವರೊಂದಿಗೆ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ.
ಆದರೆ ಬಾಲಕಿ ಈ ವಿಷಯವನ್ನು ಪಾಲಕರ ಬಳಿ ಹೇಳಿಕೊಂಡಿದ್ದು, ನಂತರ ಮಹಿಳಾ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ.