ಜಿಲ್ಲೆ

ಮಳೆ ಅನಾಹುತ ತಡೆಯಲು ಸನ್ನದ್ಧರಾಗಿ

ಅಧಿಕಾರಿಗಳಿಗೆ ರಶ್ಮಿ ಸೂಚನೆ ಚರಂಡಿ, ಕಾಲುವೆ ಸ್ವಚ್ಛತೆಗೆ ಕ್ರಮ ವಹಿಸಿ

ರಾಮನಗರ
ಮುಂಗಾರು ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲ ಸಿದ್ಧತೆ ಮಾಡಿಕೊಂಡು ಸನ್ನದ್ದರಾಗಿರಬೇಕು. ಯಾರು ಕೂಡ ರ್ನಿಲಕ್ಷ$್ಯ ವಹಿಸಬಾರದು ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ, ನೋಂದಣಿ ಮುದ್ರಾಂಕ, ಭೂಮಿ ಮತ್ತು ಯುಪಿಒಆರ್​) ಸರ್ಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್​ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಂದಾಯ ವಿಷಯಗಳು ಹಾಗೂ ಮುಂಗಾರು ಹಂಗಾಮಿನ ಹವಾಮಾನ ಅವಲೋಕನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ಎಚ್ಚರಿಕೆ ನೀಡಬೇಕು, ಚರಂಡಿ, ಕಾಲುವೆಗಳು ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ಪರಿಶೀಲನೆ ಮಾಡಬೇಕು. ಯಾವುದೇ ದುರಸ್ತಿಯಿದ್ದಲ್ಲಿ ಪರಿಶೀಲಿಸಿ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.

ಸಭೆಗೂ ಮುನ್ನ ರಾಮನಗರದಲ್ಲಿ ಕಳೆದ ಸಾಲಿನಲ್ಲಿ ಪ್ರವಾಹ ಪೀಡಿತವಾದ ಭಕೆರೆ ಮತ್ತು ಗೌಸಿಯಾ ನಗರ ಬಳಿ ಇರುವ ಕಾಲುವೆ ಸೇರಿ ಹಲವು ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ. ಅವಿನಾಶ್​ ಮೆನನ್​ ರಾಜೇಂದ್ರನ್​, ಜಿಪಂ ಸಿಇಒ ದಿಗ್ವಿಜಯ್​ ಬೋಡ್ಕೆ, ಎಡಿಸಿ ಶಿವಾನಂದ ಮೂರ್ತಿ ಮುಂತಾದವರು ಇದ್ದರು.

ರ್ನಿಲಕ್ಷ್ಯ ತೋರಿದರೆ ಕ್ರಮ
ರಾಮನಗರ ಜಿಲ್ಲೆಯಲ್ಲಿ ಈ ಹಿಂದೆ ಭಾರಿ ಮಳೆ ಹಾಗೂ ನೆರೆ ಹಾವಳಿಯಿಂದ ಬಹಳಷ್ಟು ತೊಂದರೆಯಾಗಿದ್ದ ಪ್ರದೇಶಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಮಳೆ ಹೆಚ್ಚು ಬೀಳುವ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಿದರು.


ಮಂಚನಬೆಲೆ ಡ್ಯಾಂ ಸುತ್ತಮುತ್ತ ಹಾಗೂ ಅರ್ಕಾವತಿ ನದಿ ಪಾತ್ರಗಳಲ್ಲಿ ತೊಂದರೆಗೀಡಾಗುವ ಸನ್ನಿವೇಶ ಎದುರಾಗಬಹುದು. ಜನರ ಸ್ಥಳಾಂತರಕ್ಕೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಮುನ್ನೆಚ್ಚರಿಕೆ ವಹಿಸದೆ ಹೋದರೆ ಪರಿಸ್ಥಿತಿ ನಿಯಂತ್ರಣ ಅಸಾಧ್ಯ. ಯಾವುದೇ ಸಿದ್ಧತೆ ಮಾಡಿಕೊಳ್ಳದೆ ರ್ನಿಲಕ್ಷ್ಯ ವಹಿಸುವಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಶ್ಮಿ ತಿಳಿಸಿದರು.

ತಪ್ಪು ಮಾಹಿತಿ ಅಪ್​ಲೋಡ್​ ಮಾಡಬೇಡಿ
ಬೆಳೆ ನಷ್ಟ ಪರಿಹಾರಕ್ಕೆ ಇ&ಕೆವೈಸಿಯನ್ನು ಅಪ್​ಲೋಡ್​ ಮಾಡುವಾಗ ಡೇಟಾ ಎಂಟ್ರಿ ಆಪರೇಟರ್​ಗಳು ತಪ್ಪಾಗಿ ನಮೂದಿಸಿದರೆ ಪರಿಹಾರ ಮೊತ್ತವು ಬೇರೆಯವರ ಖಾತೆಗೆ ಹೋಗುತ್ತದೆ. ಆದ್ದರಿಂದ ಡೇಟಾ ಆಪರೇಟರ್​ಗಳು ಸರಿಯಾಗಿ ಇ&ಕೆವೈಸಿಗಳನ್ನು ಅಪ್​ಲೋಡ್​ ಮಾಡಬೇಕು. ತಪ್ಪಾದರೆ ತಹಶೀಲ್ದಾರ್​ ಹಾಗೂ ಡೇಟಾ ಎಂಟ್ರಿ ಆಪರೇಟರ್​ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಶ್ಮಿ ಎಚ್ಚರಿಸಿದರು.