ರಾಮನಗರ : ಅರ್ಚಕರಹಳ್ಳಿ ಬಳಿ ನಿರ್ಮಾಣವಾಗಬೇಕಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರಿಸುತ್ತಿರುವ ವಿರೋಧಿ ಸೆ.8ಕ್ಕೆ ರಾಮನಗರ ಬಂದ್ ಗೆ ಕರೆ ನೀಡಲಾಗಿದೆ.
ಈ ಸಂಬಂಧ ಮಂಗಳವಾರ ಕೆಂಗಲ್ ಹನುಮಂತಯ್ಯ ಹೋರಾಟ ಸಮಿತಿವತಿಯಿಂದ ರಾಮನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪೂರ್ವಬಾವಿ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತಣಾಡಿದ ಮಾಜಿ ಶಾಸಕ ಎ.ಮಂಜುನಾಥ್ , ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೆಡಿಕಲ್
ಕಾಲೇಜನ್ನು ಕನಕಪುರಕ್ಕೆ ಏಕೆ ಸ್ಥಳಾಂತರ ಮಾಡುತ್ತಿದ್ದೀರಿ ರಾಮನಗರದ ಮೇಲೆ ಏಕೆ ನಿಮ್ಮ ದ್ವೇಷ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರನ್ನು ಪ್ರಶ್ನಿಸಿದರು.
ನೀವೂ ಕನಕಪುರದಲ್ಲಿ ಹುಟ್ಟಿದ್ದೀರಿ ನಿಮಗೆ ಮೆಡಿಕಲ್ ಕಾಲೇಜ್ ಬೇಕು ಎಂದರೆ ನಿಮ್ಮದೇ ಸರ್ಕಾರ ಇದೆ ಹೊಸ ಮೆಡಿಕಲ್ ಕಾಲೇಜು ಮಾಡಿಕೊಳ್ಳಿ ರಾಮನಗರದ ರಾಜೀವ್ ಗಾಂಧಿ ವಿ.ವಿ. ಕ್ಯಾಂಪಸ್‌ನಿಂದ ಕಾಲೇಜ್ ತೆಗೆದುಕೊಂಡು ಹೋದರೆ ಜನ ನಿಮ್ಮ ವಿರುದ್ದ ಹೋರಾಟ ಮಾಡಲು ನಾವು ಒಂದಾಗುವುದಕ್ಕೆ ಜಾಸ್ತಿ ಸಮಯದಲ್ಲಿ ಬೇಕಾಗಿಲ್ಲ, ಎಲ್ಲವೂ ಕನಕಪುರಕ್ಕೆ ಬೇಕು ಎಂದರೆ ಹೇಗೆ? ಜನ ಅಧಿಕಾರ ನೀಡಿದ್ದಾರೆ ಒಳ್ಳೆಯ ಕೆಲಸ ಮಾಡಿ, ಇಲ್ಲವೇ ಸುಮ್ಮನಿರಿ ಕಾಲೇಜ್ ಕನಕಪುರಕ್ಕೆ ಸ್ಥಳಾಂತರಿಸುತ್ತಿರುವುದರ ವಿರುದ್ಧ ರಾಮನಗರದಲ್ಲಿ ಸೆಪ್ಟೆಂಬರ್ 8 ರಂದು ರಾಮನಗರ ಬಂದ್ ಮಾಡುತ್ತೇವೆ. ಬಂದ್‌ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಮುಖಂಡರು ಬೆಂಬಲ ನೀಡಲಿದ್ದಾರೆ ಎಂದರು.
ಬಿಜೆಪಿ ಮುಖಂಡ ಪ್ರಸಾದ್‌ಗೌಡ ಮಾತಾನಾಡಿ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರಕ್ಕೆ ಮಾಡಲು ಮುಂದಾದರೆ ಉಗ್ರ ಹೋರಾಟ ಮಾಡುತ್ತೇವೆ ರಾಮನಗರ ಬಂದ್ ಮಾಡುವುದರ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮನೆಗೂ ಮುತ್ತಿಗೆ ಹಾಕಲಾಗುತ್ತದೆ. ಬಿಜೆಪಿ ನಾಯಕರಾದ ಯಡಿಯೂರಪ್ಪ, ಅಶ್ವಥ್‌ನಾರಾಯಣ್ ಅರವರನ್ನ ಕರೆಸಿ ಹೋರಾಟ ಮಾಡ್ತಿವಿ, ಸ್ಥಳಾಂತರ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.
ಸಭೆಯಲ್ಲಿ ಗೌತಮ್‌ಗೌಡ, ಕರ್ನಾಟಕ ರಕ್ಷಣಾವೇದಿಕೆ ಸ್ವಾಭಿಮಾನ ಬಣ ಅಧ್ಯಕ್ಷ ಕೃಷ್ಣೇಗೌಡ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ರೈತ ಸಂಘದ ಮಲ್ಲಯ್ಯ, ಮುಂತಾದವರು ಮಾತನಾಡಿದರು.
ಸಭೆಯಲ್ಲಿ ಮುಖಂಡರುಗಳಾದ ರೈಡ್ ನಾಗರಾಜ್, ನರಸಿಂಹಮೂರ್ತಿ, ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ರಾಜಶೇಖರ್, ಎಸ್.ಆರ್. ನಾಗರಾಜ್, ಶಿವಮಾದು, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ನಾಗೇಶ್, ರವಿ, ಬಿ. ಉಮೇಶ್, ಪಾಂಡುರಂಗ, ಕೃಷ್ಣಮೂರ್ತಿ, ಸೋಮಶೇಖರ್ ಮುಂತಾದವರಿದ್ದರು.