ರಾಮನಗರ: ಮಗಾ ನೀನು ಜಿಮ್ಗೆ ಹೋಗಬೇಡ.. ಅಲ್ಲಿ ಏನಾದ್ರೂ ಆದರೆ ನಮಗೆ ಯಾರು ದಿಕ್ಕು ಎಂದು ಆ ತಾಯಿ ಹೇಳಿದ ಕಾಳಜಿ ಮಾತು ಮಗನಿಗೆ ಅರ್ಥವಾಗಲೇ ಇಲ್ಲ..
ನನ್ನ ಆಸೆಗೆ ಅಡ್ಡಿ ಆಗುತ್ತಿದ್ದಾಳೆ ಎಂದು ತಾಯಿ ಬಳಿ ಮುಸಿನಿಕೊಂಡು ಆ ಯುವಕ ಮಾಡಿಕೊಂಡಿದ್ದು, ಮಾತ್ರ ಘೋರ ದುರಂತ. ತಾಯಿಯ ಪ್ರೀತಿಯ ಮಾತುಗಳನ್ನು ಅಪಾರ್ಥ ಮಾಡಿಕೊಂಡು ಇಹ ಲೋಕವನ್ನೇ ತ್ಯಜಿಸಿದ್ದಾನೆ.
ಹೌದು ಇಂತಹ ಘೋರ ಘಟನೆ ನಡೆದಿರುವುದು ರಾಮನಗರದಲ್ಲಿ.
ಆಗಿದ್ದೇನು?: ಮೂಲತಃ ತಾಲೂಕಿನ ಪಾದರಹಳ್ಳಿ ಗ್ರಾಮದ ಚಂದನ್ ನಾಯ್ಕ (17) ಮೃತ ಯುವಕ. ತನ್ನ ತಾಯಿಯೊಟ್ಟಿಗೆ ರಾಮನಗರ ಪವಿತ್ರ ರಾಷ್ಟ್ರೀಯ ವಿದ್ಯಾಲಯದ ಬಳಿ ಬಾಡಿಗೆ ಮನೆಯಲ್ಲಿ. ತಾಯಿ ಕೂಲಿ ಮಾಡಿಕೊಂಡಿದ್ದರೂ, ತನ್ನ ಮಗನನ್ನು ಚೆನ್ನಾಗಿ ಓದಿಸಬೇಕು ಎಂದು ಕಷ್ಟಪಡುತ್ತಿದ್ದಳು. ಮಂಗಳವಾರ ಜಿಮ್ಗೆ ಹೋಗುತ್ತೇನೆ ಎಂದ ಮಗನಿಗೆ, ಏನಾದರೂ ಪ್ರಾಣಾಪಾಯ ಆಗುತ್ತದೆ ಎನ್ನುವ ಭಯದಲ್ಲಿ ಜಿಮ್ ಗೆ ಹೋಗಬೇಡ ಎಂದು ತಾಯಿ ಹೇಳಿದ್ದಾಳೆ. ಸುಗ್ಗನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಚಂದನ್ ನಾಯ್ಕ, ತಾಯಿ ಮಾತಿಗೆ ಬೇಸರಗೊಂಡು ನಗರದ ಆರ್ಟಿಓ ಕಚೇರಿ ಬಳಿ ಮಂಗಳವಾರ ರಾತ್ರಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.
ಈ ಸಂಬಂಧ ಚನ್ನಪಟ್ಟಣ ರೈಲ್ವೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮಹಿಳೆ ಆತ್ಮಹತ್ಯೆ: ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಮದ್ದೂರು ತಾಲೂಕು ಸೋಮನಹಳ್ಳಿ ರೈಲ್ವೆ ಹಳಿ ಮೇಲೆ ಸುಮಾರು 35 ವರ್ಷದ ಮಹಿಳೆ ಶವ ಪತ್ತೆಯಾಗಿದೆ. ಈಕೆಯದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಮೃತ ಮಹಿಳೆ ಬಳಿ ಪರಿಮಳ ಎನ್ನುವ ಚೀಟಿ ದೊರೆತಿದೆ. ಮಂಗಳವಾರ ರಾತ್ರಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಿಶ್ವಮಾನವ ಎಕ್ಸ್ ಪ್ರೆಸ್ ರೈಲಿಗೆ ಸಿಲುಕು ಮೃತಪಟ್ಟಿದ್ದು, ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ.