ರಾಮನಗರ
ತಾಲೂಕಿನ ದೊಡ್ಡಗಂಗವಾಡಿ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಜಿಲ್ಲಾ ಕೇಂದ್ರ ರಾಮನಗರದಿಂದ ದೊಡ್ಡಗಂಗವಾಡಿ ಗ್ರಾಮ 16 ಕಿ.ಮಿ. ದೂರದಲ್ಲಿದೆ. ಕೆಎಸ್‌ಆರ್‌ಟಿಸಿ ಬಸ್ ಬಿಟ್ಟರೆ ಪ್ರಯಾಣಕ್ಕೆ ಬೇರೆ ವ್ಯವಸ್ಥೆಯಿಲ್ಲ. ಜತೆಗೆ ಗ್ರಾಮ ಜಿಲ್ಲಾ ಪ್ರಮುಖ ರಸ್ತೆಯಿಂದ ಒಳಭಾಗದಲ್ಲಿದೆ. ಪ್ರಯಾಣಕ್ಕೆ ಇಲ್ಲಿನ ಜನರು, ಶಾಲಾ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಬೇಕಿದೆ. ಈ ಭಾಗದಲ್ಲಿ ಖಾಸಗಿ ಬಸ್‌ಗಳು ಸಂಚರಿಸುವುದಿಲ್ಲ. ಜತೆಗೆ ಆಟೋ ವ್ಯವಸ್ಥೆ ಕೂಡ ಇಲ್ಲ.
ನಿಗದಿತ ವೇಳೆಯಲ್ಲಿ ಬೆರಳೆಣಿಕೆಯಷ್ಟು ಬಸ್‌ಗಳು ಗ್ರಾಮಕ್ಕೆ ಸಂಚರಿಸುತ್ತವೆ. ಅವು ಕೂಡ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ಜನರಿಗೆ, ವಿದ್ಯಾರ್ಥಿಗಳ ತೊಂದರೆ ಉಂಟಾಗುತ್ತಿದೆ. ತರಗತಿ ತಪ್ಪಿದರೆ ಹಾಜರಾತಿ ಕೊರತೆ ಉಂಟಾಗುತ್ತದೆ ಎಂಬುದು ವಿದ್ಯಾರ್ಥಿಗಳ ಅಳಲು. ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಯನ್ನು ಹೇಳಿಕೊಂಡಿದ್ದರೂ ಪ್ರಯೋಜನ ಆಗಿಲ್ಲ. ಸಮರ್ಪಕ ಬಸ್ ಸೇವೆಗೆ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳಾದ ಗಂಗರಾಜು, ಪ್ರಕಾಶ್, ಚೈತ್ರ, ಶಶಿ, ರವಿಕುಮಾರ್, ಗೌರಮ್ಮ, ಲೋಕೇಶ್, ಪಾರ್ವತಮ್ಮ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮ ರಾಮನಗರ ಜಿಲ್ಲಾ ಕೇಂದ್ರದಿಂದ 16 ಕಿ.ಮೀ. ದೂರವಿದೆ. ಜಾಲಮಂಗಲ - ರಾಮನಗರ ಪ್ರಮುಖ ರಸ್ತೆಯಿಂದ 4 ಕಿ.ಮೀ. ದೂರದಲ್ಲಿ ಗ್ರಾಮವಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಬೇಕು. ಖಾಸಗಿ ಬಸ್, ಆಟೋಗಳು ಸಂಚರಿಸುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಬಸ್‌ಗಳು ನಿಗದಿತ ಸಮಯಕ್ಕೆ ಬರುವುದಿಲ್ಲ. ಇದರಿಂದ ದಿನನಿತ್ಯ ತರಗತಿಗೆ ತಡವಾಗಿ ಹೋಗಬೇಕು.
ಪ್ರಕಾಶ್, ವಿದ್ಯಾರ್ಥಿ ದೊಡ್ಡಗಂಗವಾಡಿ