ಜಿಲ್ಲೆ

ನೀರಾವರಿ ಸಚಿವರ ಬದಲಾವಣೆಗೆ ಪ್ರತಿಭಟನೆ ಕಾವೇರಿ ರಕ್ಷಣೆ ಮಾಡಿಕೊಳ್ಳಲು ಆಗ್ರಹ

ಗಂಗಾಧರ ಬಿ ವಿ

ರಾಮನಗರ: ನೀರಾವರಿ ಸಚಿವರ ನಡವಳಿಕೆಯಿಂದಲೇ ಈಗ ರೈತರಿಗೆ ಸಂಕಷ್ಟ ಎದುರಾಗಿದ್ದು ಕೂಡಲೇ ಅವರನ್ನು ಬದಲಾಯಿಸುವಂತೆ ಕಬ್ಬು ಬೆಳೆಗಾರರ ಸಂದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್​ ಆಗ್ರಹಿಸಿದರು.

ನಗರದ ಎಪಿಎಂಸಿ ಮುಂಭಾಗದ ಬೆಂಗಳೂರು ಮೈಸೂರು ಹೆದ್ದಾರಿ ತಡೆ ನಡೆಸಿ ಮಾತನಾಡಿದರು. ನೀರಾವರಿ ಸಚಿವರು ತಮ್ಮ ಮಾತಿಗೆ ಬದ್ದರಾಗಿ ನಡೆದುಕೊಳ್ಳಬೇಕು. ನಾಟಕೀಯವಾಗಿ ನಡೆದುಕೊಂಡಿದ್ದೇ ಆದರೆ ಪ್ರತಿ ಬೀದಿ ಬೀದಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ.

ರಾಜ್ಯದ ಎಂಪಿಗಳು ಕಾವೇರಿ ವಿಚಾರದಲ್ಲಿ ದನಿ ಎತ್ತಬೇಕು. ಸ್ವತಃ ವಕೀಲರಾಗಿರುವ ಮುಖ್ಯಮಂತ್ರಿಗಳು ಕಾವೇರಿ ವಿಚಾರದಲ್ಲಿ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.
ಪ್ರಸ್ತುತ ಸಮಸ್ಯೆಗೆ ನೀರಾವರಿ ಸಚಿವರೇ ಕಾರಣವಾಗಿದ್ದು, ಕೂಡಲೇ ಅವರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.

ಆಮ್​ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸಂದರ್ಭಕ್ಕೆ ತಕ್ಕಂತೆ ಹೋರಾಟ ಮಾಡುವ ಕೆಲಸ ನಡೆಯುತ್ತಿದೆ. ಆದರೆ ಕಾವೇರಿ ವಿಚಾರದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಸಂಪೂರ್ಣ ವಿಲವಾಗಿದೆ. ಕೂಡಲೇ ತಜ್ಞರೊಂದಿಗೆ ಸರ್ಕಾರ ಚರ್ಚೆ ಮಾಡಿ ಸಾಧಕ ಬಾದಕಗಳನ್ನು ಪರಾಮರ್ಶಿಸಿ ಸುಪ್ರೀಂ ಕೋರ್ಟ್​ಣಲ್ಲಿ ವಾದ ಮಂಡಿಸಬೇಕು.

ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎನ್ನುವ ರ್ನಿಣಯ ರಾಜ್ಯ ಸರ್ಕಾರದಿಂದ ಆಗಬೇಕು. ಇಲ್ಲವಾದರೆ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಜಯ ಕರ್ನಾಟಕ ಸಂದ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಮೇಕೆದಾಟು ಪಾದಯಾತ್ರೆ ಅದು ಹೋರಾಟವನ್ನು ಒಂದು ಪಕ್ಷದ ಕಾರ್ಯಕ್ರಮವಾಗಿತ್ತು. ಅಂದು ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದ್ದ ಈಗಿನ ನೀರಾವರಿ ಸಚಿವರು ಈಗ ಇಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಮಂಡ್ಯದಲ್ಲಿ ಕಾವೇರಿ ವಿಚಾರವಾಗಿ ಕೇಂದ್ರ ಮಂತ್ರಿಯಾಗಿದ್ದ ಅಂಬರೀಷ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸುಮಲತಾ ಈ ಕೆಲಸವನ್ನು ಮಾಡಬೇಕು. ಸುಮಲತಾ ಗೆಲುವಿಗೆ ಟೊಂಕಕಟ್ಟಿದ್ದ ಚಿತ್ರ ನಟರು ಈಗ ಕಾವೇರಿ ನದಿ ನೀರಿಗಾಗಿ ಹೋರಾಟಕ್ಕೆ ಇಳಿಯಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರ ಭೈರೇಗೌಡ ಮಾತನಾಡಿ, ಅಕ್ರಮ ಆಸ್ತಿಗಳಿಗೆ ಸಂಬಂಧ ಜೈಲಿಗೆ ಹೋಗಿದ್ದ ಡಿ.ಕೆ.ಶಿವಕುಮಾರ್​ ಅವರು ಈಗ ಸುಪ್ರೀಂ ಕೋರ್ಟ್​ ತೀರ್ಪು ವಿರೋಧಿಸಿ ಜೈಲಿಗೆ ಹೋಗಿ ಬಂದಿದ್ದರೆ ತಮ್ಮ ಹಿಂದಿನ ಕಳಂಕವನ್ನು ತೊಳೆದುಕೊಳ್ಳಬಹುದಾಗಿತ್ತು. ಆದರೆ ಮಾಧ್ಯಮಗಳ ಮುಂದೆ ಹೇಳುವ ಹೇಳಿಕೆಗೆ ಬದ್ಧವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಕುಟುಕಿದರು.