ಜಿಲ್ಲೆ

ಯೋಧರ ಕೊಡುಗೆ ಸ್ಮರಣೀಯ

ಗಂಗಾಧರ ಬಿ ವಿ

ರಾಮನಗರ

ಕಾರ್ಗಿಲ್​ ಹೋರಾಟದಲ್ಲಿ ಮಡಿದ ವೀರರ ನೆನಪುಗಳನ್ನು ಪರಿಚಯಿಸಲು ಈ ದಿನ ವಿಶೇಷವಾಗಿದೆ ಎಂದು ಪಟೇಲ್​ ಪಬ್ಲಿಕ್​ ಆಂಗ್ಲ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್​ ಸಿ. ರಾಜು ತಿಳಿಸಿದರು.

ನಗರದ ಪಟೇಲ್​ ಪಬ್ಲಿಕ್​ ಆಂಗ್ಲ ಶಾಲೆ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್​ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್​ ವಿಜಯೋತ್ಸವ ಉದ್ಘಾಟಸಿ ಮಾತನಾಡಿ, ನಿವೃತ್ತ ಸುಬೇದಾರ್​ ಭೀಮೆಗೌಡ ಅವರನ್ನು ಸನ್ಮಾನಿಸುತ್ತಿರುವುದು ಶ್ಲಾನೀಯ. ಕಾರ್ಗಿಲ್​ ವಿಜಯೋತ್ಸವವನ್ನುರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಆಚರಿಸಿ ದೇಶಕ್ಕೆ ಯೋಧರ ಕೊಡುಗೆ ನೆನಪಿಸುವಂತಾಗಬೇಕು ಎಂದರು.

ಸರ್ಕಾರಿ ನೌಕರರ ಸಂದ ಮಾಜಿ ಅಧ್ಯಕ್ಷ ಆರ್​.ಕೆ. ಬೈರಲಿಂಗಯ್ಯ ಮಾತನಾಡಿ, ಗಡಿ ರಕ್ಷಣೆ ವಿಚಾರದಲ್ಲಿ ವಾಯುಪಡೆ, ನೌಕಾಪಡೆ, ಭೂಸೇನೆಯು ಪ್ರಪಂಚದಲ್ಲೇ ಸಧೃಡ ಶಕ್ತಿಶಾಲಿ ದೇಶವಾಗಿದೆ. ನಮ್ಮದು ಶಾಂತಿಪ್ರಿಯ ರಾಷ್ಟ್ರ. ದೇಶದ ಜನರ ನೆಮ್ಮದಿಯ ಬದುಕಿಗೆ ಯೋಧರ ಅವಶ್ಯಕತೆ ಇದೆ ಎಂದರು.

ಶಾಲಾ ಮಕ್ಕಳಿಂದ ಕಾರ್ಗಿಲ್​ ವಿಜಯೋತ್ಸವದ ಬಗ್ಗೆ ಕಿರುನಾಟಕ ಸಂವಾದ ಕಾರ್ಯಕ್ರಮ ನಡೆಯಿತು. ನೇಗೆಲಯೋಗಿ ಪದಾಧಿಕಾರಿಗಳು, ಮುಖ್ಯಶಿಕ್ಷಕ ಆರ್​.ಜಿ. ವಿನೋದ್​, ಶಿಕ್ಷಕರು ಇದ್ದರು.