ಜಿಲ್ಲೆ

ಕರಗಕ್ಕೆ ಬಂದು ನಾಪತ್ತೆಯಾದ ಒಂದೇ ಕುಟುಂಬದ ಮೂವರು

ರಾಮನಗರ: ನಗರ ಕರಗ ಮಹೋತ್ಸವಕ್ಕೆ ಬಂದಿದ್ದ ಒಂದೇ ಕುಟುಂಬ ಮೂವರು ಅನುಮಾನಾಸ್ಪದ ರೀತಿಯಲ್ಲಿ ಕಾಣೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚನ್ನಪಟ್ಟಣ ತಾಲೂಕಿನ ನಿವಾಸಿಗಳಾದ ವಿನೋದ್ ಕುಮಾರ್ (34 ) ಇವರ ಪತ್ನಿ ಶ್ಯಾಮಲ (26) ಹಾಗೂ ಪುತ್ರ ಚರಣ್ಯ (5) ಕಾಣೆಯಾದವರು.

ಕಾಣೆಯಾದ ವಿನೋದ್ ಕುಮಾರ್, ಜೂ.25ರಂದು ರಾಮನಗರದಲ್ಲಿರುವ ತಮ್ಮ ಸಹೋದರ ವಿಶ್ವನಾಥ್ ಅವರ ಮನೆಗೆ ಕುಟುಂಬ ಸಮೇತರಾಗಿ ಆಗಮಿಸಿದ್ದು, ಜೂ.29ರ ಮಧ್ಯಾಹ್ನ ಕುಟುಂಬ ಸಮೇತವಾಗಿಯೇ ಚನ್ನಪಟ್ಟಣಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದಾರೆ.

ಆದರೆ, ಸಂಜೇ ವೇಳೆಗೆ ಗೋವರ್ಧನ್ ಎನ್ನುವರು ವಿಶ್ವನಾಥ್ ಅವರಿಗೆ ವಿನೋದ್ ಕುಮಾರ್ ಕುಟುಂಬ ಮನೆಗೆ ವಾಪಾಸ್ ಆಗಿಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ ಎಲ್ಲೆಡೆ ಅವರ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ಢ್ ಆಫ್ ಎಂದು ಬರುತ್ತಿತ್ತು. ಎಲ್ಲೆಡೆ ಹುಡುಕಾಡಿದರೂ ಅವರ ಸುಳಿವು ಪತ್ತೆ ಆಗಲಿಲ್ಲ. ಆದರೆ ಜು.2ರಂದು ಕಾಣೆಯಾಗಿರುವ ವಿನೋದ್ ಕುಮಾರ್ ಅವರ ಬೈಕ್ ರಾಮನಗರ ಬಸ್ ನಿಲ್ದಾಣದ ಪಾರ್ಕಿಂಗ್‌ನಲ್ಲಿ ಇರುವುದು ಪತ್ತೆ ಆಗಿದೆ.

ಎಲ್ಲೆಡೆ ಹುಟುಕಾಟ ನಡೆಸಿದರೂ ಇಡೀ ಕುಟುಂಬ ಪತ್ತೆ ಆಗದ ಕಾರಣ ಕುಟುಂಬಸ್ಥರು ರಾಮನಗರದ ಐಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.