ಜಿಲ್ಲೆ

ಗಾಂಜಾ ಬೆಳೆದ ವ್ಯಕ್ತಿ ಬಂಧನ 10 ಕೆಜಿ ವಶಪಡಿಸಿಕೊಂಡ ತಾವರೆಕೆರೆ ಪೊಲೀಸರು

ಮಾಗಡಿ: ವ್ಯಕ್ತಿಯೊಬ್ಬನನ್ನು ಬಂಧಿಸಿರುವ ತಾವರೆಕೆರೆ ಪೊಲೀಸರು ಆತ ಬೆಳೆದಿದ್ದ 5 ಲಕ್ಷ ರೂ. ಮೌಲ್ಯದ 10 ಕೆ.ಜಿ. ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.

ಮಾಗಡಿ ತಾಲೂಕಿನ ಚೋಳನಾಯ್ಕನಹಳ್ಳಿಯ ಗೋವಿಂದಯ್ಯ ಬಂಧಿತ. ಈತ ಗಂಗಪ್ಪನಹಳ್ಳಿ ಬ್ರಿಡ್ಜ್​ ಬಳಿ ಇರುವ ಜಮೀನಿನಲ್ಲಿ ಗಾಂಜಾ ಬೆಳೆದಿರುವ ಮಾಹಿತಿ ಪಡೆದ ತಾವರೆಕೆರೆ ಪೊಲೀಸರು ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪಿಎಸ್​ಐ ರಾಮಪ್ಪ ಬಿ.ಗುತ್ತೇರ್​, ಪಿಎಸ್​ಐ ಮಹ್ಮದ್​ ಅಲ್ಲಾಖಾನ್​, ಎಂ.ಭಾಸ್ಕರ್​, ಮಂಜುನಾಥ, ಲಕ್ಷ್ಮೀಕಾಂತ, ಹೇಮಂತ್​ ಕುಮಾರು, ಶರಣಪ್ಪ, ತಿಪ್ಪೆಸ್ವಾಮಿ ಹರೀಶ್​ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್​ರೆಡ್ಡಿ ಶ್ಲಾಸಿದ್ದಾರೆ.